ದುಬೈ/ಮಾಸ್ಕೋ,10 ಆಗಸ್ಟ್ (ಹಿ.ಸ.) :
ಆ್ಯಂಕರ್ : ಅಜೆರ್ಬೈಜಾನ್–ಅರ್ಮೇನಿಯಾ ಶಾಂತಿ ಒಪ್ಪಂದದಡಿಯಲ್ಲಿ ಪ್ರಸ್ತಾಪವಾದ ‘ಟ್ರಂಪ್ ಕಾರಿಡಾರ್’ ನಿರ್ಮಾಣವನ್ನು ತಡೆಯುವುದಾಗಿ ಇರಾನ್ ಎಚ್ಚರಿಸಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿರುವ ಈ ಸಾರಿಗೆ ಮಾರ್ಗವು ದಕ್ಷಿಣ ಅರ್ಮೇನಿಯಾದ ಮೂಲಕ ಅಜೆರ್ಬೈಜಾನ್‌ನ ನಖಿಚೆವನ್ ಎಕ್ಸ್‌ಕ್ಲೇವ್ ಹಾಗೂ ಟರ್ಕಿಯನ್ನು ಸಂಪರ್ಕಿಸುವುದಾಗಿ ಯೋಜಿಸಲಾಗಿದೆ.
ಇರಾನ್‌ನ ಉನ್ನತ ನಾಯಕನ ಹಿರಿಯ ಸಲಹೆಗಾರ ಅಲಿ ಅಕ್ಬರ್ ವೆಲಾಯತಿ, ಇದನ್ನು “ಟ್ರಂಪ್‌ರ ಆಸ್ತಿಯಲ್ಲ, ಅವರ ಕೂಲಿ ಸೈನಿಕರ ಸ್ಮಶಾನ” ಎಂದು ವಾಗ್ದಾಳಿ ನಡೆಸಿದರು.
ಶ್ವೇತಭವನದಲ್ಲಿ ಶುಕ್ರವಾರ ಅಜೆರ್ಬೈಜಾನ್ ಮತ್ತು ಅರ್ಮೇನಿಯಾ ನಾಯಕರು ‘ಅಂತಾರಾಷ್ಟ್ರೀಯ ಶಾಂತಿ ಮತ್ತು ಸಮೃದ್ಧಿಗಾಗಿ ಟ್ರಂಪ್ ಮಾರ್ಗ’ ಘೋಷಣೆಗೆ ಸಹಿ ಹಾಕಿದ್ದರು.
ಅಜೆರ್ಬೈಜಾನ್ ರಾಯಭಾರಿ ಎಲಿನ್ ಸುಲೇಮಾನೋವ್, ಒಪ್ಪಂದವು ಪ್ರಾದೇಶಿಕ ಸಮೃದ್ಧಿ ಮತ್ತು ಸಾರಿಗೆ ಜಾಲಕ್ಕೆ ಹೊಸ ದಾರಿತೋರುತ್ತದೆ ಎಂದರೂ, ಅರ್ಮೇನಿಯಾ ತನ್ನ ಸಂವಿಧಾನದಿಂದ ನಾಗೋರ್ನೊ-ಕರಾಬಖ್ ಮೇಲಿನ ಹಕ್ಕಿನ ಉಲ್ಲೇಖ ತೆಗೆದ ನಂತರವೇ ಅಂತಿಮ ಶಾಂತಿ ಸಾಧ್ಯ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa