ನವದೆಹಲಿ, 01 ಆಗಸ್ಟ್ (ಹಿ.ಸ.) :
ಆ್ಯಂಕರ್ : ದೇಶದ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಇಳಿಕೆಯಾಗಿದ್ದು, ಗ್ರಾಹಕರಿಗೆ ಸ್ವಲ್ಪ ಸಮಾಧಾನ ನೀಡಿದೆ. 24 ಕ್ಯಾರೆಟ್ ಚಿನ್ನದ ದರವು 10 ಗ್ರಾಂಗೆ ₹420 ಇಳಿಕೆಯಾಗಿದ್ದು ₹1,00,020–₹1,00,170 ಮಧ್ಯೆ ವಹಿವಾಟು ನಡೆಸುತ್ತಿದೆ. 22 ಕ್ಯಾರೆಟ್ ಚಿನ್ನದ ದರ ₹91,690–₹91,840 ಆಗಿದೆ.
ಬೆಂಗಳೂರು, ಹೈದರಾಬಾದ್ ಮತ್ತು ಭುವನೇಶ್ವರದಲ್ಲಿ ಚಿನ್ನದ ದರ ಕ್ರಮವಾಗಿ ₹1,00,020 (24 ಕ್ಯಾರೆಟ್) ಮತ್ತು ₹91,690 (22 ಕ್ಯಾರೆಟ್) ಆಗಿದೆ.
ಬೆಳ್ಳಿಯ ದರ ಕೂಡ ಪ್ರತಿ ಕೆಜಿಗೆ ₹2,200 ಇಳಿಕೆಯಾಗಿದೆ. ದೆಹಲಿಯಲ್ಲಿ ₹1,14,900ಕ್ಕೆ ಮಾರಾಟವಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa