ಬುಧವಾರದ ರಾಶಿ ಫಲ
ಹುಬ್ಬಳ್ಳಿ, 09 ಜುಲೈ (ಹಿ.ಸ.) : ಆ್ಯಂಕರ್ : ಬುಧವಾರದ ರಾಶಿ ಫಲ *ಮೇಷ ರಾಶಿ.* ವ್ಯಾಪಾರದಲ್ಲಿ ಸ್ವಂತ ಆಲೋಚನೆಗಳು ಕೂಡಿ ಬರುವುದಿಲ್ಲ. ಹಣಕಾಸಿನ ವ್ಯವಹಾರಗಳು ನಿರಾಶಾದಾಯಕವಾಗಿರುತ್ತವೆ. ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗುತ್ತವೆ ಮತ್ತು ಆತ್ಮೀಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ವೃತ್ತಿಪರ ಉ
Horoscope


ಹುಬ್ಬಳ್ಳಿ, 09 ಜುಲೈ (ಹಿ.ಸ.) :

ಆ್ಯಂಕರ್ : ಬುಧವಾರದ ರಾಶಿ ಫಲ

*ಮೇಷ ರಾಶಿ.*

ವ್ಯಾಪಾರದಲ್ಲಿ ಸ್ವಂತ ಆಲೋಚನೆಗಳು ಕೂಡಿ ಬರುವುದಿಲ್ಲ. ಹಣಕಾಸಿನ ವ್ಯವಹಾರಗಳು ನಿರಾಶಾದಾಯಕವಾಗಿರುತ್ತವೆ. ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗುತ್ತವೆ ಮತ್ತು ಆತ್ಮೀಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳಿರುತ್ತವೆ. ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಬೇಕು. ನಿರುದ್ಯೋಗಿಗಳ ಶ್ರಮ ವ್ಯರ್ಥವಾಗುತ್ತವೆ.

*ವೃಷಭ ರಾಶಿ.*

ಆದಾಯ ತೃಪ್ತಿಕರವಾಗಿರುತ್ತದೆ . ವೃತ್ತಿ ವ್ಯವಹಾರದಲ್ಲಿ ಕಾರ್ಯ ಸಿದ್ಧಿ ಉಂಟಾಗುತ್ತದೆ. ಕೈಗೊಂಡ ಕಾರ್ಯಗಳು ಸುಗಮವಾಗಿ ಸಾಗುತ್ತವೆ. ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ಬಂಧುಗಳಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಉದ್ಯೋಗದಲ್ಲಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಲಾಗುತ್ತದೆ ಮತ್ತು ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುತ್ತೀರಿ.

*ಮಿಥುನ ರಾಶಿ.*

ಹಳೆ ಸಾಲದ ಒತ್ತಡದಿಂದ ಹೊರಬರಲು ಹೊಸ ಸಾಲಗಳನ್ನು ಮಾಡಬೇಕಾಗುತ್ತದೆ. ಬಾಲ್ಯದ ಗೆಳೆಯರೊಂದಿಗೆ ಭಿನ್ನಭಿಪ್ರಾಯಗಲಿರುತ್ತವ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಮನೆಯ ಹೊರಗೆ ಕಿರಿಕಿರಿಗಳು ಹೆಚ್ಚಾಗುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿನ ಫಲಿತಾಂಶಗಳು ನಿರಾಶಾದಾಯಕವಾಗಿರುತ್ತವೆ. ಉದ್ಯೋಗದಲ್ಲಿ ಋಣಾತ್ಮಕ ವಾತಾವರಣವಿರುತ್ತದೆ.

*ಕಟಕ ರಾಶಿ.*

ಸಮಾಜದಲ್ಲಿ ಪ್ರಮುಖರೊಂದಿಗಿನ ಪರಿಚಯಗಳು ಲಾಭದಾಯಕವಾಗಿರುತ್ತದೆ. ಆತ್ಮೀಯರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಕೆಲವು ವ್ಯವಹಾರಗಳಲ್ಲಿ, ಧೈರ್ಯದಿಂದ ಮುನ್ನಡೆಯುತ್ತೀರಿ . ಹಣಕಾಸಿನ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿರುತ್ತದೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಅನುಕೂಲಕರವಾಗಿರುತ್ತ . ಉದ್ಯೋಗಿಗಳು ನಿಯೋಜಿತ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತೀರಿ.

*ಸಿಂಹ ರಾಶಿ.*

ಆದಾಯಕ್ಕಿಂತ ಖರ್ಚು ಅಧಿಕವಾಗಿರುತ್ತದೆ. ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತದೆ. ಉದರ ಸಂಬಂಧಿ ಆರೋಗ್ಯ ಸಮಸ್ಯೆಗಳು ಭಯಾಧಿಸುತ್ತವೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ವ್ಯಾಪಾರದಲ್ಲಿ ಹೊಸ ಸಮಸ್ಯೆಗಳ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ವೃತ್ತಿಪರ ಉದ್ಯೋಗಗಳಲ್ಲಿ ವಿವಾದಗಳಿಂದ ದೂರವಿರುವುದು ಉತ್ತಮ.

*ಕನ್ಯಾ ರಾಶಿ.*

ಸಮಾಜದ ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಹ್ವಾನಗಳು ದೊರೆಯುತ್ತವೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಮಕ್ಕಳ ವಿವಾಹ, ಉದ್ಯೋಗ ಪ್ರಯತ್ನಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ. ಎಲ್ಲಾ ವಿಷಯಗಳಲ್ಲಿ ಬಂಧು ಮಿತ್ರರು ಸಹಾಯ ಮಾಡುತ್ತಾರೆ. ನಿರುದ್ಯೋಗಿಗಳಿಗೆ ಉದ್ಯೋಗ ಯೋಗವಿದೆ.

*ತುಲಾ ರಾಶಿ.*

ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೀರಿ . ವ್ಯಾಪಾರ ವ್ಯವಹಾರಗಳು ಆಶಾದಾಯಕವಾಗಿರುತ್ತವೆ. ಶ್ರಮಕ್ಕೆ ತಕ್ಕ ಫಲಿತಾಂಶವನ್ನು ಪಡೆಯುತ್ತೀರಿ. ವೃತ್ತಿಪರ ವ್ಯವಹಾರದಲ್ಲಿ ನಿಮ್ಮ ಸ್ವಂತ ಆಲೋಚನೆಗಳನ್ನು ಹೊಂದಿರುವುದು ಒಳ್ಳೆಯದು. ಮನೆಯ ಹೊರಗೆ ಅನುಕೂಲಕರ ವಾತಾವರಣವಿರುತ್ತದೆ. ಬಂಧುಮಿತ್ರರಲ್ಲಿ ಸಣ್ಣಪುಟ್ಟ ವಿವಾದ ಉಂಟಾಗುತ್ತದೆ.

*ವೃಶ್ಚಿಕ ರಾಶಿ.*

ಕೈಗೊಂಡ ಕೆಲಸಗಳು ಮಧ್ಯದಲ್ಲಿ ನಿಲ್ಲುತ್ತವೆ. ಇತರರ ವರ್ತನೆಯು ಮಾನಸಿಕ ಅಶಾಂತಿಯನ್ನು ಉಂಟುಮಾಡುತ್ತದೆ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತವೆ. ಕುಟುಂಬ ಸದಸ್ಯರ ಆರೋಗ್ಯ ವಿಷಯದಲ್ಲಿ ಜಾಗರೂಕರಾಗಿರಿ.

*ಧನುಸ್ಸು ರಾಶಿ.*

ಮಕ್ಕಳ ವಿದ್ಯಾಭ್ಯಾಸ ವಿಷಯಗಳು ಸಮಸ್ಯಾತ್ಮಕವಾಗಿರುತ್ತವೆ . ವೃತ್ತಿಪರ ವ್ಯವಹಾರಗಳಲ್ಲಿ ಗೊಂದಲಮಯ ಸನ್ನಿವೇಶಗಳಿರುತ್ತವೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ವೃತ್ತಿಪರ ಉದ್ಯೋಗಗಳಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ವೆಚ್ಚವನ್ನು ನಿಯಂತ್ರಿಸಲು ಕಷ್ಟವಾಗುತ್ತವೆ. ದೈವಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

*ಮಕರ ರಾಶಿ.*

ಸಂಗಾತಿಯೊಂದಿಗೆ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತೀರಿ. ಸರ್ಕಾರಿ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಅಗತ್ಯಕ್ಕೆ ಸ್ನೇಹಿತರ ಸಹಾಯವನ್ನು ಸ್ವೀಕರಿಸಲಾಗುತ್ತದೆ. ಮಕ್ಕಳ ವಿದ್ಯಾ ವಿಷಯಗಳು ತೃಪ್ತಿಕರವಾಗಿರುತ್ತದೆ . ಪ್ರಯಾಣದ ಸಮಯದಲ್ಲಿ ಹೊಸ ಪರಿಚಯವಾಗುತ್ತದೆ. ಉದ್ಯೋಗದಲ್ಲಿ ಉನ್ನತ ಹುದ್ದೆಗಳನ್ನು ಪಡೆಯುತ್ತೀರಿ.

*ಕುಂಭ ರಾಶಿ.*

ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹ ದೊರೆಯುತ್ತದೆ. ಬಂಧು ಮಿತ್ರರೊಂದಿಗೆ ಭೋಜನಾ ಮನರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೀರಿ. ಆದಾಯದ ವಿಷಯದಲ್ಲಿ ಕೊರತೆಗಳನ್ನು ನೀಗಿಸಲಾಗುತ್ತದೆ. ವ್ಯಾಪಾರದಲ್ಲಿ ಶತ್ರುಗಳ ಸಮಸ್ಯೆ ದೂರವಾಗುತ್ತದೆ. ಮನೆಯ ಹೊರಗೆ ವಾತವರಣ ಅನುಕೂಲಕರವಾಗಿರುತ್ತದೆ. ಆರ್ಥಿಕ ಪ್ರಗತಿ ಸಾಧಿಸಲಾಗುತ್ತದೆ.

*ಮೀನ ರಾಶಿ.*

ಹೊಸ ವಸ್ತ್ರ ಖರೀದಿಸುತ್ತೀರಿ. ಕುಟುಂಬ ಸದಸ್ಯರೊಂದಿಗೆ ಸಮಾಜ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ಎಲ್ಲಾ ವ್ಯವಹಾರಗಳು ಅನುಕೂಲಕರವಾಗಿರುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುತ್ತೀರಿ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande