ನಗರ ಕೇಂದ್ರ ಗ್ರಂಥಾಲಯದ ಸೇವೆ ತಾತ್ಕಾಲಿಕವಾಗಿ ಸ್ಥಗಿತ
ರಾಯಚೂರು, 09 ಜುಲೈ (ಹಿ.ಸ.) : ಆ್ಯಂಕರ್ : ಸ್ಟೇಷನ್ ರೋಡ್, ನಗರ ಉದ್ಯಾನವನ ಪಕ್ಕದ ನಗರ ಕೇಂದ್ರ ಗ್ರಂಥಾಲಯ ಕಟ್ಟಡವನ್ನು ಜುಲೈ 07 ರಿಂದ ಆಧುನೀಕರಣ, ನವೀಕರಣ ಕಾರ್ಯಕೈಗೊಂಡ ಪ್ರಯುಕ್ತ ಗ್ರಂಥಾಲಯದ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ
ನಗರ ಕೇಂದ್ರ ಗ್ರಂಥಾಲಯದ ಸೇವೆ ತಾತ್ಕಾಲಿಕವಾಗಿ ಸ್ಥಗಿತ


ರಾಯಚೂರು, 09 ಜುಲೈ (ಹಿ.ಸ.) :

ಆ್ಯಂಕರ್ : ಸ್ಟೇಷನ್ ರೋಡ್, ನಗರ ಉದ್ಯಾನವನ ಪಕ್ಕದ ನಗರ ಕೇಂದ್ರ ಗ್ರಂಥಾಲಯ ಕಟ್ಟಡವನ್ನು ಜುಲೈ 07 ರಿಂದ ಆಧುನೀಕರಣ, ನವೀಕರಣ ಕಾರ್ಯಕೈಗೊಂಡ ಪ್ರಯುಕ್ತ ಗ್ರಂಥಾಲಯದ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಿರ್ಮಲಾ ಹೆಚ್ ಹೊಸೂರು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ರಾಯಚೂರು ಸಹಾಯಕ ಆಯುಕ್ತರು ಗ್ರಂಥಾಲಯಕ್ಕೆ ಭೇಟಿ ನೀಡಿ ಮೌಖಿಕ ಆದೇಶದ ಮೇರೆಗೆ ಗ್ರಂಥಾಲಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಸೇವೆಯನ್ನು ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ ರಾಯಚೂರು ನಗರದಲ್ಲಿ ಇರುವ ಶಾಖಾ ಗ್ರಂಥಾಲಯದಲ್ಲಿ ಸೇವೆಯನ್ನು ಪಡೆದುಕೊಳ್ಳುವಂತೆ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande