ಹೇಮಚಂದ್ ಯಾದವ್ ವಿಶ್ವವಿದ್ಯಾಲಯದ ವೆಬ್‌ಸೈಟ್ ಹ್ಯಾಕ್
ರಾಯ್‌ಪುರ, 08 ಜುಲೈ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಹೇಮಚಂದ್ ಯಾದವ್ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ ಅನ್ನು ಸೋಮವಾರ ತಡರಾತ್ರಿ ಅಪರಿಚಿತ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದಾರೆ. ಅವರು ವೆಬ್‌ಸೈಟ್ ಮುಖಪುಟದಲ್ಲಿ ನಿಂದನೀಯ ಪದಗಳು ಮತ್ತು ಭಾರತ ವಿರುದ್ಧದ ಬೆದರಿಕೆ ಸಂದೇಶಗಳ
ಹೇಮಚಂದ್ ಯಾದವ್ ವಿಶ್ವವಿದ್ಯಾಲಯದ ವೆಬ್‌ಸೈಟ್ ಹ್ಯಾಕ್


ರಾಯ್‌ಪುರ, 08 ಜುಲೈ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಹೇಮಚಂದ್ ಯಾದವ್ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ ಅನ್ನು ಸೋಮವಾರ ತಡರಾತ್ರಿ ಅಪರಿಚಿತ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದಾರೆ. ಅವರು ವೆಬ್‌ಸೈಟ್ ಮುಖಪುಟದಲ್ಲಿ ನಿಂದನೀಯ ಪದಗಳು ಮತ್ತು ಭಾರತ ವಿರುದ್ಧದ ಬೆದರಿಕೆ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ.

ವಿಶ್ವವಿದ್ಯಾಲಯದ ಆಡಳಿತವು ತಕ್ಷಣವೇ ಸೈಬರ್ ಸೆಲ್ ಹಾಗೂ ರಾಷ್ಟ್ರೀಯ ಸೈಬರ್ ಏಜೆನ್ಸಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದು, ಸರ್ವರ್ ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ. ಡೆವಲಪರ್‌ಗಳ ಸಹಕಾರದಿಂದ ವೆಬ್‌ಸೈಟ್ ಮರುಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ.

ವಿಶ್ವವಿದ್ಯಾನಿಲಯ ಮೂಲಗಳ ಪ್ರಕಾರ, ಈ ಹ್ಯಾಕಿಂಗ್‌ಗೆ ಪಾಕಿಸ್ತಾನ ಮೂಲದ ಹ್ಯಾಕಿಂಗ್ ಗುಂಪು HOA X1137 ಹೊಣೆ ಹೊತ್ತಿದೆ ಎಂಬ ಶಂಕೆಯಿದೆ. ಹ್ಯಾಕರ್‌ಗಳು ವೆಬ್‌ಸೈಟ್‌ನಲ್ಲಿ ಪಾಕಿಸ್ತಾನ ಸಂಬಂಧಿತ ಪೋಸ್ಟರ್‌ಗಳನ್ನು ಹಾಕಿ, ಭಾರತ-ಪಾಕಿಸ್ತಾನ ಗಡಿಯಲ್ಲಿ ನಡೆದ ದಾಳಿಗಳನ್ನು ಉಲ್ಲೇಖಿಸಿರುವುದಾಗಿ ವರದಿಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande