ಬಳ್ಳಾರಿ ಸರ್ಕಾರಿ ವೀಕ್ಷಣಾಲಯದ ಬಾಲಕ ಕಾಣೆ
ಬಳ್ಳಾರಿ, 08 ಜುಲೈ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ದೇವಿನಗರದಲ್ಲಿರುವ ಸರ್ಕಾರಿ ವೀಕ್ಷಣಾಲಯದ ನಿವಾಸಿ ಮಾರುತಿ (16) ಜುಲೈ 06 ರಂದು ವೀಕ್ಷಣಾಲಯದಿಂದ ಕಾಣೆಯಾಗಿದ್ದು, ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಹರೆ: ಅಂದಾಜು 5.7 ಅಡಿ ಎತ್ತರ, ಕಪ್ಪು ಮೈಬಣ್ಣ, ತೆಳುವಾದ ಮ
ಬಳ್ಳಾರಿ : ಸರ್ಕಾರಿ ವೀಕ್ಷಣಾಲಯದ ಬಾಲಕ ಕಾಣೆ


ಬಳ್ಳಾರಿ, 08 ಜುಲೈ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ದೇವಿನಗರದಲ್ಲಿರುವ ಸರ್ಕಾರಿ ವೀಕ್ಷಣಾಲಯದ ನಿವಾಸಿ ಮಾರುತಿ (16) ಜುಲೈ 06 ರಂದು ವೀಕ್ಷಣಾಲಯದಿಂದ ಕಾಣೆಯಾಗಿದ್ದು, ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಹರೆ: ಅಂದಾಜು 5.7 ಅಡಿ ಎತ್ತರ, ಕಪ್ಪು ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ತುಂಬು ತೋಳಿನ ಟಿ-ಶರ್ಟ್, ಬೂದಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.

ಮೇಲ್ಕಂಡ ಚಹರೆ ಗುರುತುಗಳುಳ್ಳ ಬಾಲಕ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731, 244145, ಪಿಐ ಮೊ.9480803047, ಪಿಎಸ್‍ಐ ಮೊ.94808203085 ಮತ್ತು ಬಳ್ಳಾರಿ ಪೆÇಲೀಸ್ ಕಂಟ್ರೋಲ್ ರೂಂ.08392-258100 ಗೆ ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande