ಜಮ್ಮು, 07 ಜುಲೈ (ಹಿ.ಸ.) :
ಆ್ಯಂಕರ್ : 38 ದಿನಗಳ ಅಮರನಾಥ ತೀರ್ಥಯಾತ್ರೆಯ ಆರನೇ ದಿನ, ಭಗವತಿ ನಗರ ಮೂಲ ಶಿಬಿರದಿಂದ 8,605 ಯಾತ್ರಾರ್ಥಿಗಳ ತಂಡ ಸೋಮವಾರ ಮುಂಜಾನೆ ಕಾಶ್ಮೀರದತ್ತ ಪ್ರಯಾಣ ಆರಂಭಿಸಿದೆ. ಈ ತಂಡದಲ್ಲಿ 6,486 ಪುರುಷರು, 1,826 ಮಹಿಳೆಯರು, 42 ಮಕ್ಕಳು ಹಾಗೂ 251 ಸಾಧು-ಸಾಧ್ವಿಯರು ಸೇರಿದ್ದಾರೆ.
ಜುಲೈ 3 ರಂದು ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳಲ್ಲಿ ಯಾತ್ರೆ ಆರಂಭವಾದ ನಂತರದಿಂದ ಈವರೆಗೆ 70,000ಕ್ಕೂ ಹೆಚ್ಚು ಭಕ್ತರು 3,880 ಮೀ. ಎತ್ತರದಲ್ಲಿರುವ ಪವಿತ್ರ ಗುಹೆಗೆ ಭೇಟಿ ನೀಡಿದ್ದಾರೆ. ಈ ತಂಡದ ಮೊದಲ ಗುಂಪು 3,486 ಯಾತ್ರಿಕರೊಂದಿಗೆ 166 ವಾಹನಗಳಲ್ಲಿ ಬಾಲ್ಟಾಲ್ ಮಾರ್ಗವಾಗಿ ಹೊರಟಿತು. ನಂತರದ 206 ವಾಹನಗಳಲ್ಲಿ 5,119 ಯಾತ್ರಿಕರು ಪಹಲ್ಗಾಮ್ ಮಾರ್ಗವನ್ನು ಅವಲಂಬಿಸಿದರು.
ಇದು ಬುಧವಾರದ ನಂತರದ ಅತಿದೊಡ್ಡ ಯಾತ್ರಾರ್ಥಿಗಳ ತಂಡ ಆಗಿದ್ದು, ಇಲ್ಲಿಯವರೆಗೆ ಒಟ್ಟು 40,361 ಭಕ್ತರು ಜಮ್ಮುವಿನಿಂದ ಕಣಿವೆಗೆ ತೆರಳಿದ್ದಾರೆ. ಸ್ಥಳೀಯ ನೋಂದಣಿಗಾಗಿ ಸ್ಥಾಪಿಸಲಾದ ಕೌಂಟರ್‌ಗಳಲ್ಲಿ ಭಾರಿ ಜನಸಂದಣಿ ಕಂಡುಬರುತ್ತಿದ್ದು, ಇದನ್ನು ನಿಯಂತ್ರಿಸಲು ಹೆಚ್ಚುವರಿ ಕೌಂಟರ್‌ಗಳು ಹಾಗೂ ದೈನಂದಿನ ಯಾತ್ರೆ ಮಿತಿ ಹೆಚ್ಚಿಸಲಾಗಿದೆ.
ಈ ನಡುವೆ ದೇಶದ ವಿವಿಧ ಭಾಗಗಳಿಂದ 3,000 ಕ್ಕೂ ಹೆಚ್ಚು ಭಕ್ತರು ನೋಂದಣಿಗೆ ಜಮ್ಮು ತಲುಪಿದ್ದಾರೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕವೂ ಭಕ್ತರ ಭಕ್ತಿ ಹಾಗೂ ಧೈರ್ಯ ಕ್ಷೀಣಿಸಿಲ್ಲ. ಶಿವನ ಆಶೀರ್ವಾದ ಪಡೆಯುವ ನಂಬಿಕೆಯಿಂದಲೇ ನಾವು ಈ ಪವಿತ್ರ ಯಾತ್ರೆಗೆ ಬಂದಿದ್ದೇವೆ, ಎಂದು ಭಕ್ತರು ತಿಳಿಸಿದ್ದಾರೆ.
ಈ ವರ್ಷ ಭದ್ರತೆಯನ್ನು ಸುಸಂಗತಗೊಳಿಸಲು ಜಮ್ಮು ವಿಭಾಗದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 180 ಕಂಪನಿಗಳನ್ನು ನಿಯೋಜಿಸಲಾಗಿದೆ, ಇದು ಕಳೆದ ವರ್ಷದಿಗಿಂತ 30 ಹೆಚ್ಚು. ಯಾತ್ರಾರ್ಥಿಗಳಿಗೆ RFID ಟ್ಯಾಗ್‌ಗಳನ್ನು ನೀಡಲಾಗಿದ್ದು, ಜಮ್ಮುವಿನಲ್ಲಿ 34 ವಸತಿ ಕೇಂದ್ರಗಳ ವ್ಯವಸ್ಥೆ ಕೂಡಾ ಕಲ್ಪಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa