ಕೊಪ್ಪಳ, 07 ಜುಲೈ (ಹಿ.ಸ.) :
ಆ್ಯಂಕರ್ : ಬಿಎಸ್ಆರ್ ಕೆ ಮೂವೀಸ್ ಬ್ಯಾನರ್ ಅಡಿಯಲ್ಲಿ ನಾಲ್ಕನೇ ಸಿನಿಮಾ ನಿರ್ಮಾಣವಾಗುತ್ತಿದ್ದು ಈ ಸಿನಿಮಾಕ್ಕೆ ಮಕ್ಕಳ ಹಕ್ಕುಗಳು ಎಂದು ಟೈಟಲ್ ನೊಂದಾಯಿಸಲಾಗಿದ್ದು ಸೋಮವಾರದಂದು ಕೊಪ್ಪಳದ ಶ್ರೀ ಗವಿಮಠದಲ್ಲಿ ಮೂಹೂರ್ತ ಕಾರ್ಯಕ್ರಮ ನಡೆಯಿತು ಈ ಚಿತ್ರಕ್ಕೆ ಪೂಜ್ಯ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಚಿತ್ರಿಕರಣಕ್ಕೆ ಚಾಲನೆ ನೀಡಿದರು. ಕರ್ತೃಗದ್ದಿಗೆ ಗವಿಸಿದ್ದೇಶ್ವರರಿಗೆ ಪೂಜೆ ಸಲ್ಲಿಸುವುದರ ಮೂಲಕ ಚಿತ್ರೀಕರಣ ಆರಂಭಿಸಲಾಯಿತು
ಈ ಚಲನಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಬಸವರಾಜ್ ಕೊಪ್ಪಳ ಹೊತ್ತಿದ್ದಾರೆ ಇವರು ಈ ಮೊದಲು ಮೂರು ಬಿಟ್ಟವರು ಊರಿಗೆ ದೊಡ್ಡವರು ಜ್ವಲ್ ಪಾರ್ಟಿ ಹಾಗೂ ಬಾಬೂಜಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಈಗ ಅವರ ಬಿಎಸ್ಆರ್ ಕೆ ಮೂವೀಸ್ ಬ್ಯಾನರ್ ಅಡಿಯಲ್ಲಿ ನಾಲ್ಕನೇ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ .
ಈ ಈ ಚಿತ್ರದಲ್ಲಿ ಇತ್ತೀಚಿಗೆ ಸದ್ದು ಮಾಡಿದ್ದ ಪಪ್ಪಿ ಸಿನಿಮಾ ಖ್ಯಾತಿಯ ಜಗದೀಶ್ ಬಾಲ ನಟ ಹಾಗೂ ಟಿವಿ ಗಾಯಕ ಅರ್ಜುನ್ ಇಟಗಿ ಹಾಗೂ ಬಾಬೂಜಿ ಸಿನಿಮಾ ಖ್ಯಾತಿಯ ಶ್ರೀ ವಚನ್ ರಾಜ್ ಹಾಗೂ ಶ್ರೀ ವರ್ಧನ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಹಾಗೂ ಇನ್ನೂ ಅನೇಕ ತಾರಾ ಬಳಗ ಹಾಗೂ ತಂತ್ರಜ್ಞರು ಕಾರ್ಯನಿರ್ವಹಿಸಲಿದ್ದಾರೆ.
ಇಂದಿನ ಮುಹೂರ್ತ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಡಾಕ್ಟರ್ ಮಹಾಂತೇಶ್ ಮಲ್ಲನಗೌಡರ್ ಹಾಗೂ ವಕೀಲರಾದ ಜಿಎಂ ಶಿವಪುರ ಪರ್ವತ ಗೌಡರ್ ಯಮನೂರ್ ನಾಯಕ್ ಸುರೇಶ್ ಹಲಗೇರಿ ನಾಗರಾಜ್ ಶೆಟ್ಟಿ, ದುರ್ಗಪ್ಪ ಹಾಲ್ವರ್ತಿ ಪರಶುರಾಮಪ್ಪ ಹಾಲ್ವರ್ತಿ ಅಶೋಕ್ ಹೊಸಪೇಟೆ ಪಾಂಡು ಕೆಎಸ್ ಗಜಾನನ ಮುಂತಾದವರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್