ಪಾಟ್ನಾ, 06 ಜುಲೈ (ಹಿ.ಸ.) :
ಆ್ಯಂಕರ್ : ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ಸನಾತನ ಮಹಾ ಕುಂಭ ಕಾರ್ಯಕ್ರಮದಲ್ಲಿ ಜಗದ್ಗುರು ರಾಮಭದ್ರಾಚಾರ್ಯರು ಮಾತನಾಡಿ, ಹಿಂದೂಗಳನ್ನು ವಿಭಜಿಸಲು ಯತ್ನಿಸುವವರು ಸ್ವತಃ ನಾಶವಾಗುತ್ತಾರೆ ಎಂದರು.
ಇದೇ ವೇದಿಕೆಯಲ್ಲಿ ಬಾಬಾ ಧೀರೇಂದ್ರ ಕೃಷ್ಣ ಶಾಸ್ತ್ರಿ ಮಾತನಾಡಿ, ನಾವು ರಾಜಕೀಯಕ್ಕಾಗಿ ಅಲ್ಲ, ರಾಮನೀತಿಗಾಗಿ ಇಲ್ಲಿ ಇದ್ದೇವೆ. ಭಾರತ ಹಿಂದೂ ರಾಷ್ಟ್ರವಾದರೆ ಅದು ಬಿಹಾರದಿಂದ ಆರಂಭವಾಗುತ್ತದೆ ಎಂದು ಹೇಳಿದರು.
ಕೆಲವರು ತ್ರಿವರ್ಣ ಧ್ವಜದ ಮೇಲೆ ಚಂದ್ರನನ್ನು ಬಯಸುತ್ತಾರೆ, ಆದರೆ ನಾವು ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಾಡುವುದನ್ನು ನೋಡಲು ಬಯಸುತ್ತೇವೆ ಎಂಬುದಾಗಿ ಹೇಳಿದರು.
ಈ ಮಹಾಕುಂಭವು ಧಾರ್ಮಿಕ ಪ್ರವಚನ, ಭಜನೆ, ವೇದ ಪಠಣ, ಹವನ ಹಾಗೂ ಸಂತರ ಸಭೆಗಳೊಂದಿಗೆ ನೆರವೇರಿತು. ದೇಶದ ವಿವಿಧ ಭಾಗಗಳಿಂದ ಸಂತರು ಹಾಗೂ ಜಗದ್ಗುರುಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa