ನವದೆಹಲಿ, 06 ಜುಲೈ (ಹಿ.ಸ.) :
ಆ್ಯಂಕರ್ : ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರ 90ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದರು.
“ಪವಿತ್ರ ದಲೈ ಲಾಮಾ ಅವರ 90ನೇ ಹುಟ್ಟುಹಬ್ಬದಂದು ಅವರಿಗೆ ಶುಭಾಶಯಗಳನ್ನು ಕೋರಲು ನಾನು 1.4 ಶತಕೋಟಿ ಭಾರತೀಯರೊಂದಿಗೆ ಸೇರುತ್ತೇನೆ. ಅವರು ಪ್ರೀತಿ, ಕರುಣೆ, ತಾಳ್ಮೆ ಮತ್ತು ನೈತಿಕ ಶಿಸ್ತಿನ ಶಾಶ್ವತ ಸಂಕೇತವಾಗಿದ್ದಾರೆ. ಅವರ ಸಂದೇಶವು ಎಲ್ಲಾ ಧರ್ಮದ ಜನರಲ್ಲಿ ಗೌರವ ಮತ್ತು ಮೆಚ್ಚುಗೆಯನ್ನು ಪ್ರೇರೇಪಿಸಿದೆ,” ಎಂದು ಪ್ರಧಾನಿ ಹೇಳಿದ್ದಾರೆ.
ದೊಡ್ಡಮಾನ್ಯ ಬೌದ್ಧ ಧರ್ಮಗುರು ಟೆನ್ಜಿನ್ ಗ್ಯಾಟ್ಸೋ, ಅಂದರೆ ಪ್ರಸ್ತುತದ 14ನೇ ದಲೈ ಲಾಮಾ, 1935ರ ಜುಲೈ 6ರಂದು ಟಿಬೆಟ್‌ನ ತಕ್‌ಸ್ಟರ್ ಗ್ರಾಮದಲ್ಲಿ ಜನಿಸಿದರು. 1959ರಲ್ಲಿ ಚೀನಾದ ಆಕ್ರಮಣದ ಬಳಿಕ ಭಾರತಕ್ಕೆ ಬಂದ ಅವರು ಧರ್ಮಶಾಲಾದಲ್ಲಿ ನೆಲೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa