ಭೋಪಾಲ್, 06 ಜುಲೈ (ಹಿ.ಸ.) :
ಆ್ಯಂಕರ್ : ಮಧ್ಯ ಪ್ರದೇಶ ಸರ್ಕಾರವು ರಾಜ್ಯದ ಹೂಡಿಕೆ ಆಕರ್ಷಣೆಯ ಉದ್ದೇಶದಿಂದ ಜುಲೈ 7ರಂದು ಲುಧಿಯಾನದಲ್ಲಿ ವರ್ಷದ ಮೂರನೇ ರೋಡ್ ಶೋ ಆಯೋಜಿಸಲಿದೆ.
ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ನೇತೃತ್ವದಲ್ಲಿ ನಡೆಯುವ ಈ ರೋಡ್ ಶೋ, ಜವಳಿ, ಆಹಾರ ಸಂಸ್ಕರಣೆ, ಐಟಿ ಮತ್ತು ಉತ್ಪಾದನಾ ವಲಯಗಳಲ್ಲಿ ಹೂಡಿಕೆ ಭಾಗಿತ್ವಕ್ಕೆ ಪೂರಕ ವೇದಿಕೆಯಾಗಲಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಬಬಿತಾ ಮಿಶ್ರಾ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಲುಧಿಯಾನದಲ್ಲಿ ವರ್ಧಮಾನ್ ಜವಳಿ, ದೀಪಕ್ ಫಾಸ್ಟೆನರ್ಸ್ ಸೇರಿ ಪ್ರಮುಖ ಕೈಗಾರಿಕಾ ಸಂಸ್ಥೆಗಳಿಗೆ ಭೇಟಿ ನೀಡಿ, ಪ್ರತ್ಯಕ್ಷ ಸಂವಾದಗಳಲ್ಲಿ ಭಾಗವಹಿಸಲಿದ್ದಾರೆ. ಹೊಸ ಕೈಗಾರಿಕಾ ನೀತಿ, ಹೂಡಿಕೆ ಉತ್ತೇಜನ ಯೋಜನೆಗಳು, ಪಿಎಂ ಮಿತ್ರ ಪಾರ್ಕ್, ಒಡಿಒಪಿ, ಲಾಜಿಸ್ಟಿಕ್ಸ್ ಕ್ಲಸ್ಟರ್ ಮುಂತಾದ ಯೋಜನೆಗಳ ಕುರಿತು ಉದ್ಯಮಿಗಳಿಗೆ ಮಾಹಿತಿ ನೀಡಲಿದ್ದಾರೆ.
ಟ್ರೈಡೆಂಟ್ ಗ್ರೂಪ್ ಕೇಂದ್ರ ಕಚೇರಿಯಲ್ಲಿ ‘ಹೈ-ಟೀ ಸಂವಾದ’ ಸಹ ನಡೆಯಲಿದ್ದು, ಇದರ ಮೂಲಕ ಉದ್ಯಮ-ರಾಜ್ಯ ನಡುವಿನ ದೀರ್ಘಕಾಲೀನ ಸಹಕಾರವನ್ನು ಬಲಪಡಿಸುವ ಉದ್ದೇಶವಿದೆ. ಈ ರೋಡ್ ಶೋ ರಾಜ್ಯದ ನೂತನ ಕೈಗಾರಿಕಾ ದೃಷ್ಟಿಕೋಣ ಮತ್ತು ವ್ಯವಸ್ಥಿತ ನಾಯಕತ್ವದ ಪ್ರತೀಕವಾಗಿದ್ದು, ಲುಧಿಯಾನಾದಂತಹ ಕೈಗಾರಿಕಾ ನಗರಗಳೊಂದಿಗೆ ಶಕ್ತಿಶಾಲಿ ಸಹಕಾರದ ನವ ದಾರಿಗಳನ್ನು ತೆರೆಯುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa