ಧರ್ಮಶಾಲಾ, 06 ಜುಲೈ (ಹಿ.ಸ.) :
ಆ್ಯಂಕರ್ : ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರು 90ನೇ ವರ್ಷಕ್ಕೆ ಕಾಲಿಟ್ಟರು. ಈ ಅಂಗವಾಗಿ, ಮ್ಯಾಕ್ಲಿಯೋಡ್ಗಂಜ್‌ನ ಚುಗ್ಲಖಾಂಗ್ ಬೌದ್ಧ ಮಠದಲ್ಲಿ ಭವ್ಯ ಸಮಾರಂಭ ನಡೆಯಿತು. ದಲೈ ಲಾಮಾ ಸ್ವತಃ ಕೇಕ್ ಕತ್ತರಿಸಿ ಅನುಯಾಯಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು, ಪೆಮಾ ಖಂಡು, ಹಾಲಿವುಡ್ ನಟ ರಿಚರ್ಡ್ ಗೆರೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ದಲೈ ಲಾಮಾರವರಿಗೆ ಶುಭಾಶಯ ತಿಳಿಸಿದ್ದಾರೆ.
ದಲೈ ಲಾಮಾ (ಟೆನ್ಜಿನ್ ಗ್ಯಾಟ್ಸೋ) ಜುಲೈ 6, 1935ರಂದು ಟಿಬೆಟ್‌ನ ತಕ್ಸರ್ ಗ್ರಾಮದಲ್ಲಿ ಜನಿಸಿದರು. ಕೇವಲ ಎರಡು ವರ್ಷ ವಯಸ್ಸಿನಲ್ಲಿ ಅವರನ್ನು 14ನೇ ದಲೈ ಲಾಮಾ ಪುನರ್ಜನ್ಮವೆಂದು ಗುರುತಿಸಲಾಯಿತು. 1959ರ ಚೀನಾ ದಾಳಿಯ ನಂತರ ಅವರು ಭಾರತಕ್ಕೆ ಗಡಿಪಾರು ಆಗಿ ಧರ್ಮಶಾಲಾದಲ್ಲಿ ನೆಲೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa