ಜಮ್ಮು, 06 ಜುಲೈ (ಹಿ.ಸ.) :
ಆ್ಯಂಕರ್ : ದಕ್ಷಿಣ ಕಾಶ್ಮೀರದ ಅಮರನಾಥ ಗುಹಾ ದೇವಾಲಯದತ್ತ ನಿರಂತರ ಮಳೆಯ ನಡುವೆಯೂ ಭಾನುವಾರ ಮುಂಜಾನೆ 7,208 ಯಾತ್ರಿಕರ ತಂಡ ಭಗವತಿ ನಗರ ಮೂಲ ಶಿಬಿರದಿಂದ ಹೊರಟಿತು.
ಈ ತಂಡದಲ್ಲಿ 1,587 ಮಹಿಳೆಯರು ಮತ್ತು 30 ಮಕ್ಕಳು ಸೇರಿದ್ದಾರೆ. ಎರಡು ಪ್ರತ್ಯೇಕ ಬೆಂಗಾವಲುಗಳಲ್ಲಿ ಬೆಳಗ್ಗೆ 3:35 ರಿಂದ 4:15ರ ನಡುವೆ ಅವರು ಪ್ರಯಾಣ ಆರಂಭಿಸಿದರು. ಇದು ಜುಲೈ 2 ರಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಯಾತ್ರೆಗೆ ಚಾಲನೆ ನೀಡಿದ ನಂತರದ ಅತಿದೊಡ್ಡ ಯಾತ್ರಿಕರ ತಂಡವಾಗಿದೆ.
ಈವರೆಗೆ ಜಮ್ಮುವಿನಿಂದ ಒಟ್ಟು 31,736 ಯಾತ್ರಿಕರು ಕಣಿವೆಯತ್ತ ಸಾಗಿದ್ದಾರೆ. 147 ವಾಹನಗಳಲ್ಲಿ 3,199 ಯಾತ್ರಿಕರು ಬಾಲ್ಟಾಲ್ ಮಾರ್ಗದಲ್ಲಿ ಹಾಗೂ 160 ವಾಹನಗಳಲ್ಲಿ 4,009 ಯಾತ್ರಿಕರು ಪಹಲ್ಗಾಮ್ ಮಾರ್ಗದಲ್ಲಿ ತಮ್ಮ ಯಾತ್ರೆ ಆರಂಭಿಸಿದರು.
ಜುಲೈ 3 ರಂದು ಪ್ರಾರಂಭವಾದ 38 ದಿನಗಳ ವಾರ್ಷಿಕ ಯಾತ್ರೆಯಲ್ಲಿ ಈಗಾಗಲೇ 50,000 ಕ್ಕೂ ಹೆಚ್ಚು ಯಾತ್ರಿಕರು ಅಮರನಾಥ ಗುಹಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa