ಹುಬ್ಬಳ್ಳಿ, 05 ಜುಲೈ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿಯ ಹೊಸೂರು ಬಳಿಯ ಪಾರಿಜಾತ ರೆಸಿಡೆನ್ಸಿ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ವಿದ್ಯಾನಗರ ಠಾಣೆ ಪೊಲೀಸರು ದಾಳಿ ನಡೆಸಿ ಐದು ಜನರನ್ನು ಬಂಧಿಸಿದ್ದಾರೆ.
ಗಣೇಶ್ ಹೊನ್ನೇಗೌಡ (36), ಹಾಸನ, ಭಾಸ್ಕರ್ ನಾಯಕ್ (39), ಕಾರವಾರ, ಮಹೇಶಪ್ಪ ಕುಪ್ಪೇಲೂರು (30), ಹಾವೇರಿ,ರವಿ ಎಸ್. (26), ಮೈಸೂರು,ರವಿಕುಮಾರ್ ಕೆ. (35), ತುಮಕೂರು ಎಂಬುವವರನ್ನು ಬಂಧಿಸಲಾಗಿದೆ.
ಒಟ್ಟು ಐದು ಮಹಿಳೆಯರನ್ನು ರಕ್ಷಿಸಲಾಗಿದ್ದು.
ಈ ಪ್ರಕರಣದಲ್ಲಿ ಹರೀಶ್ ಎಂಬಾತ ಪರಾರಿಯಾಗಿದ್ದು, ಅವನ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೋಲಿಸ ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa