ನವದೆಹಲಿ, 05 ಜುಲೈ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಅರ್ಜೆಂಟೀನಾ ರಾಜಧಾನಿ ಬ್ಯೂನಸ್ ಐರಿಸ್‌ಗೆ ಭೇಟಿ ನೀಡಿ, 57 ವರ್ಷಗಳಲ್ಲಿ ಭಾರತೀಯ ಪ್ರಧಾನಿಯಿಂದ ನಡೆಯುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿಯಾಗಿ ದಾಖಲಾಗಿದೆ.
ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲ್ಲೆ ಅವರೊಂದಿಗೆ ಉನ್ನತ ಮಟ್ಟದ ಚರ್ಚೆ ನಿರೀಕ್ಷೆಯಿದ್ದು, ಸಾಂಸ್ಕೃತಿಕ ಸಂಬಂಧಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಭಾರತ-ಅರ್ಜೆಂಟೀನಾ ನಡುವಿನ ಸಹಕಾರವನ್ನು ವ್ಯಾಪಾರ, ಹೂಡಿಕೆ, ಇಂಧನ, ವಿಜ್ಞಾನ ಹಾಗೂ ತಂತ್ರಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ.
ಬ್ಯೂನಸ್ ಐರಿಸ್‌ನಲ್ಲಿ ಭಾರತೀಯ ಸಮುದಾಯದಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಸಿಕ್ಕಿದ್ದು, ಅವರು “ಇದು ಭಾವನಾತ್ಮಕ ಕ್ಷಣ” ಎಂದು ಪ್ರತಿಕ್ರಿಯಿಸಿದರು. ವಿದೇಶಾಂಗ ಸಚಿವಾಲಯ ಈ ಭೇಟಿಯನ್ನು ಶಾಶ್ವತ ಸ್ನೇಹದ ಸಂಕೇತವೆಂದು ಬಣ್ಣಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa