ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರ ಮಲೇಷ್ಯಾ ಭೇಟಿ
ನವದೆಹಲಿ, 05 ಜುಲೈ (ಹಿ.ಸ.) : ಆ್ಯಂಕರ್ : ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಜುಲೈ 7-8ರಂದು ಕಾಂಬೋಡಿಯಾಕ್ಕೆ ಹಾಗೂ ಜುಲೈ 10-11ರಂದು ಮಲೇಷ್ಯಾಕ್ಕೆ ಅಧಿಕೃತ ಭೇಟಿನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಕಾಂಬೋಡಿಯಾದಲ್ಲಿ ಉನ್ನತ ನಾಯಕತ್ವ, ಐಟಿಇಸಿ/ಐಸಿಸಿಆರ್ ಹಳೆ
Eam


ನವದೆಹಲಿ, 05 ಜುಲೈ (ಹಿ.ಸ.) :

ಆ್ಯಂಕರ್ : ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಜುಲೈ 7-8ರಂದು ಕಾಂಬೋಡಿಯಾಕ್ಕೆ ಹಾಗೂ ಜುಲೈ 10-11ರಂದು ಮಲೇಷ್ಯಾಕ್ಕೆ ಅಧಿಕೃತ ಭೇಟಿನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕಾಂಬೋಡಿಯಾದಲ್ಲಿ ಉನ್ನತ ನಾಯಕತ್ವ, ಐಟಿಇಸಿ/ಐಸಿಸಿಆರ್ ಹಳೆಯ ವಿದ್ಯಾರ್ಥಿಗಳು ಮತ್ತು ಭಾರತೀಯ ಸಮುದಾಯದೊಂದಿಗೆ ಚರ್ಚೆ ನಡೆಯಲಿದೆ. ಅಲ್ಲಿನ ವಿಶ್ವ ಪರಂಪರೆಯ ತಾಣಗಳ ಪುನಃಸ್ಥಾಪನೆಗೆ ಭಾರತ ನೀಡುತ್ತಿರುವ ಸಹಕಾರವನ್ನು ಅವರು ಪರಿಶೀಲಿಸಲಿದ್ದಾರೆ.

ಮಲೇಷ್ಯಾ ಭೇಟಿಯಲ್ಲಿ, ಅವರು ಆಸಿಯಾನ್-ಭಾರತ, ಪೂರ್ವ ಏಷ್ಯಾ ಶೃಂಗಸಭೆ ಮತ್ತು ಆಸಿಯಾನ್ ಪ್ರಾದೇಶಿಕ ವೇದಿಕೆ ಸಭೆಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಭೇಟಿ 'ಆಕ್ಟ್ ಈಸ್ಟ್ ಪಾಲಿಸಿ' ಮತ್ತು ಇಂಡೋ-ಪೆಸಿಫಿಕ್ ದೃಷ್ಟಿಕೋನಕ್ಕೆ ಭಾರತದ ಬದ್ಧತೆಯನ್ನು ಮತ್ತೆ ಉಲ್ಲೇಖಿಸುತ್ತದೆ. ಅಲ್ಲದೆ, ಇತರ ದೇಶಗಳ ವಿದೇಶಾಂಗ ಮಂತ್ರಿಗಳೊಂದಿಗೆ ದ್ವಿಪಕ್ಷೀಯ ಚರ್ಚೆಯೂ ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande