ಇಂಫಾಲ್, 05 ಜುಲೈ (ಹಿ.ಸ.) :
ಆ್ಯಂಕರ್ : ಮಣಿಪುರದ ಇಂಫಾಲ್ ಪಶ್ಚಿಮದ ಮೊಯಿರಾಂಗ್‌ಖೋಮ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ ಉಗ್ರ ಸಂಘಟನೆಯ 38 ವರ್ಷದ ಸದಸ್ಯ ಹೆಸ್ನಮ್ ರೋಮಿಯೋ ಸಿಂಗ್ ಅವರನ್ನು ಬಂಧಿಸಲಾಗಿದೆ. ಅವರಿಂದ ನಗದು, ಮೊಬೈಲ್, ಕೈಚೀಲ ವಶಪಡಿಸಿಕೊಳ್ಳಲಾಗಿದೆ.
ಚಾನ್‌ಬಿರೋಕ್ ಬೆಟ್ಟದ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳು, ಗ್ರೆನೇಡ್‌ಗಳು, ಐಇಡಿಗಳು, ಕಾರ್ಟ್ರಿಡ್ಜ್‌ಗಳು ಸೇರಿದಂತೆ ಭಾರೀ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ತೌಬಲ್ ಜಿಲ್ಲೆಯಲ್ಲಿ ನಾಲ್ಕು ಕದ್ದ ವಾಹನಗಳು ಪತ್ತೆಯಾಗಿದ್ದು, ಮೂರು ಮಾಲೀಕರನ್ನು ಗುರುತಿಸಲಾಗಿದೆ.
ಚುರಾಚಂದ್‌ಪುರ ಜಿಲ್ಲೆಯಲ್ಲಿ ಮತ್ತೊಂದು ದಾಳಿಯಲ್ಲಿ ದೇಶೀಯ ರೈಫಲ್, ಲೈವ್ ಕಾರ್ಟ್ರಿಡ್ಜ್‌ಗಳನ್ನು ಪೊಲೀಸರು ವಶಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa