ಮುಂಬಯಿ, 04 ಜುಲೈ (ಹಿ.ಸ.) :
ಆ್ಯಂಕರ್ : ಕಾಜೋಲ್ ನಟನೆಯ ಹೊಸ ದೇಶಭಕ್ತಿಯ ಚಿತ್ರ ‘ಸರ್ಜಮೀನ್’ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ರಾಹಿಂ ಅಲಿ ಖಾನ್ ಅವರು ಈ ಚಿತ್ರದಲ್ಲಿ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಭೀತಿದಾಯಕ ಅವತಾರ ಪ್ರೇಕ್ಷಕರ ಗಮನ ಸೆಳೆದಿದೆ. ದಕ್ಷಿಣ ಭಾರತೀಯ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರವನ್ನು ಕೆಒಜೆ ಇರಾನಿ ನಿರ್ದೇಶಿಸಿದ್ದು, ಭಾವನೆ, ಆಕ್ಷನ್ ಮತ್ತು ನಾಟಕೀಯತೆ ತುಂಬಿರುವ ಕಥಾಹಂದರವನ್ನು ಹೊಂದಿದೆ. ಜುಲೈ 25ರಂದು ‘ಡಿಸ್ನಿ+ ಹಾಟ್‌ಸ್ಟಾರ್’ ನಲ್ಲಿ ಚಿತ್ರ ಬಿಡುಗಡೆ ಆಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa