ಹೊಸಪೇಟೆ, 04 ಜುಲೈ (ಹಿ.ಸ.) :
ಆ್ಯಂಕರ್ : ಹೊಸಪೇಟೆಯ ಆಶ್ರಯ ಕಾಲೋನಿ, 22 ನೇ ವಾರ್ಡಿನ ನಿವಾಸಿ ವಿ.ಡಿ.ಮುಂತಾಜ್ ಬೇಗಂ (42) ಮಹಿಳೆ ಹಾಗೂ ಅಕೆಯ ಮಗನಾದ ವಾಸಿಂ ಅಕ್ರಂ (13) ಜೂ.13 ರಂದು ಕಾಣೆಯಾಗಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ : ಬಿಳಿ ಮೈ ಬಣ್ಣ, ದಪ್ಪನೆಯ ಮೈಕಟ್ಟು, ಕೋಲು ಮುಖ, 5.1 ಅಡಿ ಎತ್ತರ, ತಲೆಯಲ್ಲಿ ಕಪ್ಪು ಕೂದಲಿದ್ದು, ಕನ್ನಡ, ಉರ್ದು ಭಾಷೆ ಮಾತನಾಡುತ್ತಾಳೆ. 10 ನೇ ತರಗತಿ ವಿದ್ಯಾಭ್ಯಾಸ ಮಾಡಿರುತ್ತಾಳೆ. ಮನೆಯಿಂದ ಹೋಗುವಾಗ ಕಂದು ಬಣ್ಣದ ಹಾಗೂ ಬಿಳಿ ಬಣ್ಣದ ಹೂವಿನ ಡಿಸೈನ್‍ನ ಸೀರೆ ಧರಿಸಿರುತ್ತಾಳೆ. ಬೆನ್ನಿನ ಹಿಂದೆ ಬಲಭಾಗದಲ್ಲಿ ಕಪ್ಪು ಮಚ್ಚೆ ಇರುತ್ತದೆ.
ಕಾಣೆಯಾದ ಮಗುವಿನ ಚಹರೆ : ಬಿಳಿ ಬಣ್ಣ, ಸಾಧಾರಣಾ ಮೈಕಟ್ಟು, ಕೋಲು ಮುಖ, 4.1 ಅಡಿ ಎತ್ತರ, ತಲೆಯಲ್ಲಿ ಕಪ್ಪು ಕೂದಲಿದ್ದು, ಕನ್ನಡ, ಉರ್ದು ಭಾಷೆ, ಮಾತನಾಡುತ್ತಾನೆ. 7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಬಿಳಿ ಬಣ್ಣದ ಟೀಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಬಲ ತೋಳಿನ ಮೇಲೆ ಕಪ್ಪು ಮಚ್ಚೆ ಇರುತ್ತದೆ.
ಕಾಣೆಯಾದ ತಾಯಿ ಮತ್ತು ಮಗನ ಬಗ್ಗೆ ಮಾಹಿತಿ ಸಿಕ್ಕಲಿ ಗ್ರಾಮೀಣ ಪೊಲೀಸ್ ಠಾಣೆ, ಹೊಸಪೇಟೆ ಕಂಟ್ರೋಲ್ ರೂಂ.ಮೊ.ಸಂ. 9480807700, ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ. 08394-228233 ಹಾಗೂ ಪಿಐ ಗ್ರಾಮೀಣ ಪೊಲೀಸ್ ಠಾಣೆಯ ಮೊ.ಸಂ. 9480805746 ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್