ವಾಷಿಂಗ್ಟನ್, 31 ಜುಲೈ (ಹಿ.ಸ.) :
ಆ್ಯಂಕರ್ : ಅಮೆರಿಕದ ಟ್ರಂಪ್ ಆಡಳಿತವು ಖಾಸಗಿ ತಂತ್ರಜ್ಞಾನ ಕಂಪನಿಗಳ ಸಹಯೋಗದಲ್ಲಿ ಹೊಸ ಡಿಜಿಟಲ್ ಆರೋಗ್ಯ ಟ್ರ್ಯಾಕಿಂಗ್ ಯೋಜನೆ ಆರಂಭಿಸಲಿದೆ. ಗೂಗಲ್, ಅಮೆಜಾನ್, ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಸೇರಿದಂತೆ 60ಕ್ಕೂ ಹೆಚ್ಚು ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಯೋಜನೆ ರೂಪುಗೊಳ್ಳುತ್ತಿದೆ.
ಈಡೀ ಯೋಜನೆಯ ಉದ್ದೇಶ, ನಾಗರಿಕರ ವೈಯಕ್ತಿಕ ವೈದ್ಯಕೀಯ ಮಾಹಿತಿ ಮತ್ತು ಆರೋಗ್ಯ ದಾಖಲೆಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಂಗ್ರಹಿಸಿ ಸುಲಭ ವೈದ್ಯಕೀಯ ಸೇವೆ ಒದಗಿಸುವುದು. ಮಧುಮೇಹ ನಿಯಂತ್ರಣ, ತೂಕ ನಿರ್ವಹಣೆ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಸಮಾಲೋಚನೆ ವ್ಯವಸ್ಥೆಗಳು ಯೋಜನೆಯ ಭಾಗವಾಗಿವೆ.
QR ಕೋಡ್ ಮತ್ತು ಅಪ್ಲಿಕೇಶನ್ ಆಧಾರಿತ ವ್ಯವಸ್ಥೆ ಮೂಲಕ ಆಸ್ಪತ್ರೆ ನೋಂದಣಿ, ಔಷಧಿ ಟ್ರ್ಯಾಕಿಂಗ್ ಮತ್ತಷ್ಟು ಸುಲಭವಾಗಲಿದೆ. ಆದರೆ, ಈ ಯೋಜನೆಗೆ ಸಂಬಂಧಿಸಿದಂತೆ ದತ್ತಾಂಶ ಗೌಪ್ಯತೆ ಕುರಿತು ತೀವ್ರ ಚಿಂತೆಗಳು ವ್ಯಕ್ತವಾಗಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa