ನವದೆಹಲಿ, 03 ಜುಲೈ (ಹಿ.ಸ.) :
ಆ್ಯಂಕರ್ : ಮುಂಬರುವ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಕ್ರಿಯಾತ್ಮಕ ಸುಧಾರಣೆ ಹಾಗೂ ರಾಜಕೀಯ ಪಕ್ಷಗಳೊಂದಿಗೆ ಸಂವಾದಕ್ಕಾಗಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಿಯೋಗವು ಚುನಾವಣಾ ಆಯೋಗವನ್ನು ಭೇಟಿ ಮಾಡಿತು. ಈ ನಿಯೋಗದ ನೇತೃತ್ವವನ್ನು ವೈ.ವಿ. ಸುಬ್ಬಾ ರೆಡ್ಡಿ ವಹಿಸಿದ್ದರು.
ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಡಾ. ಸುಖಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರೊಂದಿಗೆ ನಡೆದ ಚರ್ಚೆಯಲ್ಲಿ, ಚುನಾವಣೆ ಪಾರದರ್ಶಕತೆ ಮತ್ತು ಎಲ್ಲರನ್ನೂ ಒಳಗೊಂಡ ಪ್ರಕ್ರಿಯೆಗೆ ಸಂಬಂಧಿಸಿದ ಸಲಹೆಗಳನ್ನು ಮಂಡಿಸಲಾಯಿತು.
ಈ ಭೇಟಿ, ದೇಶದ ಪ್ರಮುಖ ಪಕ್ಷಗಳೊಂದಿಗೆ ಚುನಾವಣಾ ಆಯೋಗ ನಡೆಸುತ್ತಿರುವ ನಿರಂತರ ಸಂವಾದದ ಭಾಗವಾಗಿದ್ದು, ಈ ಹಿಂದೆ ಮಾಯಾವತಿ (ಬಿಎಸ್‌ಪಿ), ಜಗತ್ ಪ್ರಕಾಶ್ ನಡ್ಡಾ (ಬಿಜೆಪಿ), ಎಂ.ಎ. ಬೇಬಿ (ಸಿಪಿಐಎಂ), ಕಾನ್ರಾಡ್ ಸಂಗ್ಮಾ (ಎನ್‌ಪಿಪಿ), ಅರವಿಂದ್ ಕೇಜ್ರಿವಾಲ್ (ಆಪ್), ಹಾಗೂ ಚಂದ್ರಿಮಾ ಭಟ್ಟಾಚಾರ್ಯ (ಟಿಎಂಸಿ) ಮೊದಲಾದವರೊಂದಿಗೆ ಸಮಾಲೋಚನೆಗಳು ನಡೆದಿವೆ.
ಇದೇ ವರ್ಷ ಮಾರ್ಚ್‌ನಲ್ಲಿ ಆಯೋಗವು ದೇಶದಾದ್ಯಾಂತ 4,719 ಸರ್ವಪಕ್ಷ ಸಭೆಗಳನ್ನು ಆಯೋಜಿಸಿ, 28,000 ಕ್ಕೂ ಹೆಚ್ಚು ರಾಜಕೀಯ ಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಿತ್ತು. ಈ ಸಭೆಗಳಲ್ಲಿ ಸಿಇಒಗಳು 40, ಡಿಇಒಗಳು 800 ಮತ್ತು ಇಆರ್‌ಒಗಳು 3,879 ಸಭೆಗಳನ್ನು ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa