ಭಯೋತ್ಪಾದಕರ ಬಂಧನಕ್ಕೆ ಶೋಧ ಕಾರ್ಯಾಚರಣೆ ತೀವ್ರ
ಜಮ್ಮು, 03 ಜುಲೈ (ಹಿ.ಸ.) : ಆ್ಯಂಕರ್ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಕುಚ್ಛಲ್ ಅರಣ್ಯ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ಸೆರೆ ಹಿಡಿಯಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ. ಬುಧವಾರ ರಾತ್ರಿ 7:45ರ ಸುಮಾರಿಗೆ ಶಂಕಿತ ಸ್ಥಳವನ್ನು ಸುತ್ತುವರಿದು, ಗುರುವಾರ ಬೆಳಿಗ್
Search


ಜಮ್ಮು, 03 ಜುಲೈ (ಹಿ.ಸ.) :

ಆ್ಯಂಕರ್ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಕುಚ್ಛಲ್ ಅರಣ್ಯ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ಸೆರೆ ಹಿಡಿಯಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ. ಬುಧವಾರ ರಾತ್ರಿ 7:45ರ ಸುಮಾರಿಗೆ ಶಂಕಿತ ಸ್ಥಳವನ್ನು ಸುತ್ತುವರಿದು, ಗುರುವಾರ ಬೆಳಿಗ್ಗೆಯಿಂದ ಎನ್‌ಕೌಂಟರ್ ಆರಂಭವಾಗಿದೆ. ಓರ್ವ ಭಯೋತ್ಪಾದಕ ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ.

ಕಾರ್ಯಾಚರಣೆಯಲ್ಲಿ ಡ್ರೋನ್‌ಗಳು, ಸ್ನಿಫರ್ ಶ್ವಾನಗಳು ಹಾಗೂ ಹೆಚ್ಚುವರಿ ಭದ್ರತಾ ಪಡೆಗಳು ಭಾಗವಹಿಸಿದ್ದು, ಪ್ರದೇಶದ ಕಟ್ಟುನಿಟ್ಟಿನ ನಿಗಾ ವಿಸ್ತರಿಸಲಾಗಿದೆ. ಭಯೋತ್ಪಾದಕರು ಗುಂಡು ಹಾರಿಸಿದ ಪರಿಣಾಮ ಎನ್‌ಕೌಂಟರ್ ಆರಂಭವಾಗಿದೆ.

ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರಾದ ಸೈಫುಲ್ಲಾ ಮತ್ತು ಆದಿಲ್ ಈ ಪ್ರದೇಶದ ಬೆಟ್ಟಗಳಲ್ಲಿ ಸಕ್ರಿಯರಾಗಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande