ಬಳ್ಳಾರಿ : ಅತ್ಯಾಧುನಿಕವಾದ ರೀತಿಯಲ್ಲಿ ಸಣ್ಣ ಮಾರುಕಟ್ಟೆ ಪುನರ್ ನಿರ್ಮಾಣ
ಬಳ್ಳಾರಿ, 03 ಜುಲೈ (ಹಿ.ಸ.) : ಆ್ಯಂಕರ್ : ಬಳ್ಳಾರಿ ನಗರದ ಸಣ್ಣ ಮಾರುಕಟ್ಟೆಯನ್ನು ಅತ್ಯಾಧುನಿಕವಾದ ರೀತಿಯಲ್ಲಿ ಪುನರ್ ನಿರ್ಮಾಣದ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ ಎಂದು ಶಾಸಕ ನಾರಾ ಭರತರೆಡ್ಡಿ ಅವರು ತಿಳಿಸಿದ್ದಾರೆ. ಗುರುವಾರ ನಡೆದ `ಸಲಾಂ ಬಳ್ಳಾರಿ'' ಅಭಿಯಾನದಲ್ಲಿ
ಬಳ್ಳಾರಿ : ಅತ್ಯಾಧುನಿಕವಾದ ರೀತಿಯಲ್ಲಿ ಸಣ್ಣ ಮಾರುಕಟ್ಟೆ ಪುನರ್ ನಿರ್ಮಾಣ


ಬಳ್ಳಾರಿ : ಅತ್ಯಾಧುನಿಕವಾದ ರೀತಿಯಲ್ಲಿ ಸಣ್ಣ ಮಾರುಕಟ್ಟೆ ಪುನರ್ ನಿರ್ಮಾಣ


ಬಳ್ಳಾರಿ, 03 ಜುಲೈ (ಹಿ.ಸ.) :

ಆ್ಯಂಕರ್ : ಬಳ್ಳಾರಿ ನಗರದ ಸಣ್ಣ ಮಾರುಕಟ್ಟೆಯನ್ನು ಅತ್ಯಾಧುನಿಕವಾದ ರೀತಿಯಲ್ಲಿ ಪುನರ್ ನಿರ್ಮಾಣದ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ ಎಂದು ಶಾಸಕ ನಾರಾ ಭರತರೆಡ್ಡಿ ಅವರು ತಿಳಿಸಿದ್ದಾರೆ.

ಗುರುವಾರ ನಡೆದ `ಸಲಾಂ ಬಳ್ಳಾರಿ' ಅಭಿಯಾನದಲ್ಲಿ ಸಣ್ಣ ಮಾರುಕಟ್ಟೆ ಸ್ಥಳಕ್ಕೆ ಭೇಟಿ ನೀಡಿ, ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಂದಾಜು 2 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಮಾರುಕಟ್ಟೆಯ ಕಟ್ಟಡವನ್ನು ಪುನರ್ ನಿರ್ಮಾಣವನ್ನು ಅತ್ಯಾಧುನಿಕ ಮಾದರಿಯಲ್ಲಿ ನಡೆಸಲಾಗುತ್ತದೆ. ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್, ಪಾಲಿಕೆ ಸದಸ್ಯರಾದ ನೂರ್ ಮೊಹಮ್ಮದ್, ಮಿಂಚು ಸೀನಾ, ಎಂ. ಪ್ರಭಂಜನ ಕುಮಾರ್, ಕಾಂಗ್ರೆಸ್ ಮುಖಂಡರಾದ ಎಂ. ಸುಬ್ಬರಾಯುಡು, ಬಿಆರ್‍ಎಲ್ ಸೀನಾ, ಹಗರಿ ಗೋವಿಂದ ಇನ್ನಿತರರು ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande