ನವದೆಹಲಿ, 03 ಜುಲೈ (ಹಿ.ಸ.) :
ಆ್ಯಂಕರ್ : ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಸಮುದ್ರ ಪ್ರವಾಸೋದ್ಯಮವನ್ನು ಉತ್ತೇಜಿಸುವ ದಿಟ್ಟ ಹೆಜ್ಜೆಯಾಗಿ, ಕಾರ್ಡೆಲಿಯಾ ಕ್ರೂಸಸ್ ಎಂವಿ ಎಂಪ್ರೆಸ್ ಹಡಗಿಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಲಾಗಿದ್ದು, ಈ ಮೂಲಕ ಆಂಧ್ರದಲ್ಲಿ ಕ್ರೂಸ್ ಸೇವೆಗೆ ಚಾಲನೆ ದೊರಕಿದೆ.
ಈ ಸೇವೆಯನ್ನು ಕೇಂದ್ರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ ಸಮಾರಂಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು, ಸಚಿವರು ಮತ್ತು ಸಂಸದರು ಭಾಗವಹಿಸಿದ್ದರು.
ವಿಶಾಖಪಟ್ಟಣಂ ಬಂದರು ಪ್ರಾಧಿಕಾರ ಮತ್ತು ಕೇಂದ್ರ ಹಡಗು ಸಚಿವಾಲಯದ ಜಂಟಿ ಭಾಗವಹಿತ್ತ್ವದಲ್ಲಿ ಈ ಯೋಜನೆ ಜಾರಿಯಾಗಿದೆ. ಇದರ ಮೂಲಕ ಭಾರತವನ್ನು ಜಾಗತಿಕ ಸಮುದ್ರ ಪ್ರವಾಸೋದ್ಯಮದ ನಕ್ಷೆ ಮೇಲೆ ಪ್ರತಿಷ್ಠಿತ ತಾಣವನ್ನಾಗಿ ರೂಪಿಸುವ ಗುರಿಯತ್ತ ಇನ್ನೊಂದು ಹೆಜ್ಜೆ ಇಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa