ಶ್ರಿನಗರ, 03 ಜುಲೈ (ಹಿ.ಸ.) :
ಆ್ಯಂಕರ್ : ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಕಾ ಮನೆಗಳಿಲ್ಲದ ಸುಮಾರು 5 ಲಕ್ಷ ಜನರನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಅವರಿಗೆ ಶಾಶ್ವತ ವಸತಿ ನೀಡಲು ಕ್ರಮಗಳು ನಡೆಯುತ್ತಿವೆ ಎಂದು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲಾನುಭವಿಗಳನ್ನು ಗುರುತಿಸಲು ಸಮೀಕ್ಷೆ ನಡೆದಿದೆ. ಯಾವುದೇ ಅನರ್ಹರ ಹೆಸರನ್ನು ಸೇರಿಸದಂತೆ ಸೂಕ್ತ ಪರಿಶೀಲನೆ ನೆರವೇರಿಸಲಾಗುತ್ತಿದೆ. ನಂತರವೇ ಮನೆ ಹಂಚಿಕೆ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಅದೇ ವೇಳೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಶಕ್ತೀಕರಣಕ್ಕಾಗಿ ‘ಲಖ್ಪತಿ ದೀದಿ’ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯ ಗುರಿ, ಮಹಿಳೆಯರ ವಾರ್ಷಿಕ ಆದಾಯವನ್ನು ₹1 ಲಕ್ಷದ ವರೆಗೆ ಹೆಚ್ಚಿಸುವುದಾಗಿದೆ ಎಂದರು.
ಈಗಾಗಲೇ ಅನೇಕ ಮಹಿಳೆಯರು ಲಖ್ಪತಿ ದೀದಿಗಳಾಗಿ ಹೊರಹೊಮ್ಮಿದ್ದಾರೆ. ಮುಂದಿನ ಹಂತವಾಗಿ, ವಾರ್ಷಿಕ ₹10 ಲಕ್ಷ ಆದಾಯ ಹೊಂದುವ ಮಹಿಳೆಯರನ್ನು “ಮಿಲೇನಿಯಲ್ ದೀದಿ” ಎಂದು ಗುರುತಿಸಲು ಹೊಸ ವರ್ಗವನ್ನು ಪರಿಚಯಿಸಲಾಗಿದೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa