ನವದೆಹಲಿ, 03 ಜುಲೈ (ಹಿ.ಸ.) :
ಆ್ಯಂಕರ್ : ಭಾರತೀಯ ಸೇನೆಯ ಮೂರು ಪೆಡೆಗಳಿಗಾಗಿ ಸುಮಾರು ₹1.05 ಲಕ್ಷ ಕೋಟಿ ಮೊತ್ತದ 10 ಪ್ರಮುಖ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಗುರುವಾರ ಅನುಮೋದನೆ ನೀಡಿದೆ. ಎಲ್ಲಾ ಶಸ್ತ್ರಾಸ್ತ್ರಗಳು ದೇಶೀಯವಾಗಿ ವಿನ್ಯಾಸಗೊಳ್ಳಲಿದ್ದು, ಅಭಿವೃದ್ಧಿಪಡಿಸಲಾಗುತ್ತದೆ ಹಾಗೂ ತಯಾರಿಸಲಾಗುತ್ತದೆ.
ಈ ಖರೀದಿ ಪ್ರಸ್ತಾವನೆಗಳಲ್ಲಿ ಶಸ್ತ್ರಸಜ್ಜಿತ ಚೇತರಿಕೆ ವಾಹನಗಳು, ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳು, ಸಂಯೋಜಿತ ದಾಸ್ತಾನು ನಿರ್ವಹಣಾ ವ್ಯವಸ್ಥೆಗಳು, ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳು, ಸೂಪರ್ ಕ್ಷಿಪ್ರ ಗನ್ ಮೌಂಟ್‌ಗಳು ಮತ್ತು ಸಬ್‌ಮರ್ಸಿಬಲ್ ಸ್ವಾಯತ್ತ ಹಡಗುಗಳ ಖರೀದಿ ಸೇರಿವೆ.
ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು 'ಇಂಡಿಜಿನಸ್' ವರ್ಗದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ನಿರ್ಧಾರವು ಭಾರತದ ತ್ರಿಪಡೆಯ ಚಲನಶೀಲತೆ, ವಾಯು ರಕ್ಷಣಾ ಸಾಮರ್ಥ್ಯ, ಪೂರೈಕೆ ಸರಪಳಿ ಸಾಮರ್ಥ್ಯ ಹಾಗೂ ಕಾರ್ಯಾಚರಣಾ ಸನ್ನದ್ಧತೆಯನ್ನು ಹೆಚ್ಚಿಸಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa