ಉಜ್ಜಯಿನಿ, 29 ಜುಲೈ (ಹಿ.ಸ.) :
ಆ್ಯಂಕರ್ : ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯದ ಮೂರನೇ ಮಹಡಿಯಲ್ಲಿರುವ ನಾಗಚಂದ್ರೇಶ್ವರ ದೇವಾಲಯದ ಬಾಗಿಲುಗಳು ಸೋಮವಾರ ಮಧ್ಯರಾತ್ರಿ 12 ಗಂಟೆಗೆ ಭಕ್ತರಿಗೆ ದರ್ಶನಕ್ಕೆ ತೆರೆಯಲಾಯಿತು.
24 ಗಂಟೆಗಳ ಕಾಲ ನೇರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಮಹಾನಿರ್ವಾಣಿ ಅಖಾರದ ಮಹಂತ ವಿನೀತಗಿರಿ ಮಹಾರಾಜರು ಪೂಜೆ ನೆರವೇರಿಸಿದರು.
ಪ್ರತಿ ವರ್ಷ ಕೇವಲ ನಾಗಪಂಚಮಿಯಂದು ಮಾತ್ರ ಈ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಭಕ್ತರ ಉದ್ದನೆಯ ಸರತಿ ಸಾಲುಗಳು ರಾತ್ರಿಯಲ್ಲಿಯೇ ಕಂಡು ಬಂದಿದ್ದು, ಐದು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಭದ್ರತಾ ವ್ಯವಸ್ಥೆಗೆ 1,800 ಪೊಲೀಸ್ ಸಿಬ್ಬಂದಿ, 200 ಹಿರಿಯ ಅಧಿಕಾರಿಗಳು ಹಾಗೂ 560 ಸಿಸಿಟಿವಿ ಕ್ಯಾಮೆರಾಗಳನ್ನು ನಿಯೋಜಿಸಲಾಗಿದೆ.
11ನೇ ಶತಮಾನದ ಅಪರೂಪದ ನಾಗಚಂದ್ರೇಶ್ವರ ವಿಗ್ರಹವು ಶಿವ, ಪಾರ್ವತಿ, ಗಣೇಶ, ಸಪ್ತಮುಖಿ ನಾಗ, ನಂದಿ ಮತ್ತು ಸಿಂಹವಾಹನ ಸಮೇತ ವಿಶೇಷ ಶೈಲಿಯಲ್ಲಿ ಮೂಡಿಬಂದಿದೆ. ಈ ವಿಗ್ರಹವನ್ನು ನೇಪಾಳದಿಂದ ತಂದಿರಬಹುದು ಎಂಬ ನಂಬಿಕೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa