ನವದೆಹಲಿ, 29 ಜುಲೈ (ಹಿ.ಸ.) :
ಆ್ಯಂಕರ್ : ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಧರ್ಮ ಆಧರಿಸಿ 26 ಪ್ರವಾಸಿಗರನ್ನು ಕ್ರೂರವಾಗಿ ಹತ್ಯೆ ಮಾಡಿದ ಮೂವರು ಭಯೋತ್ಪಾದಕರು 'ಆಪರೇಷನ್ ಮಹಾದೇವ್' ನಲ್ಲಿ ಭದ್ರತಾ ಪಡೆಗಳಿಂದ ಸೋಮವಾರ ಹತರಾಗಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ತಿಳಿಸಿದರು.
ಆಪರೇಶನ್ ಸಿಂಧೂರ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಾಳಿಯ ಪ್ರಮುಖ ರೂವಾರಿಗಳಾದ ಸುಲೇಮಾನ್ (ಲಷ್ಕರ್ ಕಮಾಂಡರ್), ಅಫ್ಘಾನ್ ಮತ್ತು ಹಮ್ಜಾ ಗಿಬ್ರಾನ್ ಎಂಬ ಮೂವರು ಭಯೋತ್ಪಾದಕರನ್ನು ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಬೈಸರನ್ ಕಣಿವೆಯಲ್ಲಿ ಕಾರ್ಯಾಚರಣೆ ನಡೆಸಿ ಹೊಡೆದುರುಳಿಸಿದ್ದಾರೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa