ಮಳೆಗೆ ಮೇಲ್ಛಾವಣಿ ಕುಸಿತ ; ವಸ್ತುಗಳು ಹಾನಿ
ವಿಜಯಪುರ, 29 ಜುಲೈ (ಹಿ.ಸ.) : ಆ್ಯಂಕರ್ : ಮಳೆಗೆ ನೆನೆದಿದ್ದ ಮನೆಯ ಮೇಲ್ಚಾವಣಿ ಕುಸಿದು, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಹಾನಿಯಾಗಿರುವ ಘಟನೆ ನಗರದ ರಜಪೂತ ಗಲ್ಲಿಯಲ್ಲಿ ನಡೆದಿದೆ. ಇಲ್ಲಿನ ನಿರ್ಮಲಾ ಮಸೂತಿ ಎಂಬುವವರ ಮನೆಯ ಮೇಲ್ಛಾವಣಿ ಕುಸಿದಿದ್ದರಿಂದ ಅಡುಗೆ ಸಾಮಾನುಗಳು, ಧವಸಧಾನ್ಯಗಳು, ಬಟ್ಟ
ಮಳೆ


ವಿಜಯಪುರ, 29 ಜುಲೈ (ಹಿ.ಸ.) :

ಆ್ಯಂಕರ್ : ಮಳೆಗೆ ನೆನೆದಿದ್ದ ಮನೆಯ ಮೇಲ್ಚಾವಣಿ ಕುಸಿದು, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಹಾನಿಯಾಗಿರುವ ಘಟನೆ ನಗರದ ರಜಪೂತ ಗಲ್ಲಿಯಲ್ಲಿ ನಡೆದಿದೆ.

ಇಲ್ಲಿನ ನಿರ್ಮಲಾ ಮಸೂತಿ ಎಂಬುವವರ ಮನೆಯ ಮೇಲ್ಛಾವಣಿ ಕುಸಿದಿದ್ದರಿಂದ ಅಡುಗೆ ಸಾಮಾನುಗಳು, ಧವಸಧಾನ್ಯಗಳು, ಬಟ್ಟೆಗಳು ಹಾಳಾಗಿವೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಹಾನಿಯಾಗಿದ್ದರಿಂದ ಮನೆಯಲ್ಲಿ ಬಾಡಿಗೆಗೆ ಇದ್ದ ಗುರು ಅಗ್ನಿ ಎಂಬ ಕುಟುಂಬ ಗೋಳಾಡುತ್ತಿದ್ದು, ಸೂಕ್ತ ಪರಿಹಾರ ಒದಗಿಸಬೇಕಿದೆ. ಎಪಿಎಂಸಿ ಠಾಣೆ ವ್ಯಾಪ್ತಿ ಘಟನೆ ಜರುಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande