ಯಾತ್ರಾರ್ಥಿಗಳ ಬಸ್ ಮತ್ತು ಟ್ರಕ್ ಡಿಕ್ಕಿ ; ಐವರ ಸಾವು
ದಿಯೋಘರ್, 29 ಜುಲೈ (ಹಿ.ಸ.) : ಆ್ಯಂಕರ್ : ಜಾರ್ಖಂಡ್ ರಾಜ್ಯದ ದಿಯೋಘರ್ ಜಿಲ್ಲೆಯ ಮೋಹನಪುರ ಬ್ಲಾಕ್‌ನ ಜಮುನಿಯಾ ಬಳಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಭಕ್ತರನ್ನು ಕೊಂಡೊಯ್ಯುತ್ತಿದ್ದ ಬಸ್ ಮತ್ತು ಗ್ಯಾಸ್ ಸಿಲಿಂಡರ್‌ಗಳಿಂದ ತುಂಬಿದ್
Accident


ದಿಯೋಘರ್, 29 ಜುಲೈ (ಹಿ.ಸ.) :

ಆ್ಯಂಕರ್ : ಜಾರ್ಖಂಡ್ ರಾಜ್ಯದ ದಿಯೋಘರ್ ಜಿಲ್ಲೆಯ ಮೋಹನಪುರ ಬ್ಲಾಕ್‌ನ ಜಮುನಿಯಾ ಬಳಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ.

ಭಕ್ತರನ್ನು ಕೊಂಡೊಯ್ಯುತ್ತಿದ್ದ ಬಸ್ ಮತ್ತು ಗ್ಯಾಸ್ ಸಿಲಿಂಡರ್‌ಗಳಿಂದ ತುಂಬಿದ್ದ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಘಟನೆಯ ತೀವ್ರತೆಗೆ ಬಸ್ಸಿನ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನೆಯಲ್ಲಿ 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ವರು ಪ್ರಾಣಾಪಾಯ ಸ್ಥಿತಿಯಲ್ಲಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ದಿಯೋಘರ್ ಸದರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟವರಲ್ಲಿ ಬಸ್ ಚಾಲಕ ಸುಭಾಷ್ ತುರಿ ಸೇರಿದ್ದಾರೆ.

ಡಿಐಜಿ ಅಂಬರ್ ಲಕ್ರಾ ಅವರು ನೀಡಿದ ಮಾಹಿತಿಯಂತೆ, ಅಪಘಾತ ಸಂಭವಿಸಿದ ತಕ್ಷಣವೇ ಪೊಲೀಸ್ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿ ರಕ್ಷಣೆ ಕಾರ್ಯಾಚರಣೆಯಲ್ಲಿ ತೊಡಗಿದವು. ಬಾಬಾ ನಗರಿಯಿಂದ ಬಾಸುಕಿನಾಥ್ ಕಡೆಗೆ ಭಕ್ತರನ್ನು ಕೊಂಡೊಯ್ಯುತ್ತಿದ್ದ ಬಸ್‌ ಅಪಘಾತಕ್ಕೀಡಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande