ಮೆದುಳಿನ ಆರೋಗ್ಯಕ್ಕೆ ಗಮನ ನೀಡಿರಿ : ಡಾ. ಬಸರೆಡ್ಡಿ .ಎನ್
ಬಳ್ಳಾರಿ, 29 ಜುಲೈ (ಹಿ.ಸ.) : ಆ್ಯಂಕರ್ : ಒತ್ತಡದ ಕೆಲಸದ ನಡುವೆಯೂ ಪ್ರತಿಯೊಬ್ಬರೂ ನಿತ್ಯ ಎಂಟು ತಾಸು ನಿದ್ದೆ ಮಾಡಿ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬೆಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎನ್.ಬಸರೆಡ್ಡಿ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮ
ಮೆದುಳಿನ ಆರೋಗ್ಯಕ್ಕೆ ಗಮನ ನೀಡಿರಿ : ಡಾ. ಬಸರೆಡ್ಡಿ .ಎನ್


ಮೆದುಳಿನ ಆರೋಗ್ಯಕ್ಕೆ ಗಮನ ನೀಡಿರಿ : ಡಾ. ಬಸರೆಡ್ಡಿ .ಎನ್


ಬಳ್ಳಾರಿ, 29 ಜುಲೈ (ಹಿ.ಸ.) :

ಆ್ಯಂಕರ್ : ಒತ್ತಡದ ಕೆಲಸದ ನಡುವೆಯೂ ಪ್ರತಿಯೊಬ್ಬರೂ ನಿತ್ಯ ಎಂಟು ತಾಸು ನಿದ್ದೆ ಮಾಡಿ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬೆಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎನ್.ಬಸರೆಡ್ಡಿ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ, ಜಿಲ್ಲಾ ಆಸ್ಪತ್ರೆಯ ಮೆದುಳಿನ ಆರೋಗ್ಯ ಚಿಕಿತ್ಸಾ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆಯ ಮೆದುಳಿನ ಆರೋಗ್ಯ ಚಿಕಿತ್ಸಾ ಕೇಂದ್ರದಲ್ಲಿ ಮಂಗಳವಾರ ನಡೆದ `ಎಲ್ಲಾ ವಯಸ್ಸಿನವರಿಗೂ ಮೆದುಳಿನ ಆರೋಗ್ಯ’ ಘೋಷವಾಕ್ಯದ `ವಿಶ್ವ ಮೆದುಳು ದಿನಾಚರಣೆ-2025’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೆದುಳು ದೇಹದ ಅತ್ಯಂತ ಪ್ರಮುಖ ಭಾಗ. ಮೆದುಳು ಕಾರ್ಯ ನಿರ್ವಹಿಸದಿದ್ದಲ್ಲಿ ಅಥವಾ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇದ್ದಲ್ಲಿ ಮನುಷ್ಯರು ಪರಾವಲಂಬಿ ಆಗುತ್ತಾರೆ. ಕಾರಣ ಪ್ರತಿಯೊಬ್ಬರೂ ಮೆದಳಿನ ಆರೋಗ್ಯದ ಕಡೆ ಕಾಳಜಿ ತೋರಿಸಬೇಕು.

ಮಾನವನ ದೇಹದ ಪ್ರಮುಖ ಅಂಗ ಮೆದುಳಾಗಿದ್ದು, ಎಲ್ಲರೂ ಮೆದುಳಿನ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದರು.

ನರರೋಗ ಸಂಬಂಧಿಸಿದ ಕಾಯಿಲೆಗಳು ಹೆಚ್ಚುತ್ತಿವೆ. ಅನೇಕರು ತಲೆನೋವು, ಪಾಶ್ರ್ವವಾಯು, ಮೂರ್ಛೆರೋಗ, ಪಾರ್ಕಿನ್ ಸನ್ ಇನ್ನಿತರೆ ನರ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಹಾಗೂ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಕೆ.ಜಿ ಅವರು ಪ್ರಾಸ್ತವಿಕವಾಗಿ ಮಾತನಾಡಿ, ಮೆದುಳು ಆರೋಗ್ಯವಾಗಿರಲು ನಮ್ಮ ದೇಹವು ದೈಹಿಕ ಮತ್ತು ಮಾನಸಿಕ ಸಧೃಡವಾಗಿರಬೇಕು. ಮೆದುಳಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಕಾಳಜಿ ವಹಿಸಬೇಕು. ಮೆದುಳಿನ ಆರೋಗ್ಯದ ಜವಾಬ್ದಾರಿಯ ಬಗ್ಗೆ ಎಲ್ಲಾ ಸರಕಾರಿ ಸಂಸ್ಥೆಗಳು ಆರೋಗ್ಯ ವೃತ್ತಿಪರರು, ಆರೈಕೆದಾರರು, ನಾಗರಿಕರು ಎಲ್ಲರೂ ಸೇರಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮೆದುಳು ದಿನವನ್ನು ಆಚರಿಸಲಾಗುತ್ತದೆ ಎಂದರು.

ಮೆದುಳು ಆರೋಗ್ಯ ಚಿಕಿತ್ಸಾ ಕೇಂದ್ರದಿಂದ ಆಯೋಜಿಸಿದ್ದ `ಮೆದುಳು ಚುರುಕುಗೊಳಿಸುವ ಚಟುವಟಿಕೆ’ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ., ಜಿಲ್ಲಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ವಿಶ್ವನಾಥ್.ಕೆ., ಜಿಲ್ಲಾ ಆಸ್ಪತ್ರೆಯ ವಿಭಾಗೀಯ ಮುಖ್ಯಸ್ಥರು ಹಾಗೂ ತಜ್ಞ ವೈದ್ಯ ಡಾ.ಶ್ರೀಧರ್ ಎಂ.ಆರ್., ಮೆದುಳಿನ ಆರೋಗ್ಯ ಚಿಕಿತ್ಸಾ ಕೇಂದ್ರದ ನೋಡಲ್ ಅಧಿಕಾರಿ ಹಾಗೂ ತಜ್ಞ ವೈದ್ಯ ಡಾ. ರಾಕೇಶ್, ಜಿಲ್ಲಾ ಆಸ್ಪತ್ರೆಯ ಆಡಳಿತ ಸಹಾಯಕ ಅಧಿಕಾರಿಗಳಾದ ದುರುಗಪ್ಪ.ಟಿ., ರಜೀಯಾ ಬೇಗಂ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಕಾರ್ಯಕ್ರಮದ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಸಣ್ಣಕೇಶವ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್ ಸೇರಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande