ಪಹಲ್ಗಾಮ್ ದಾಳಿ ಉಗ್ರರ ಹತ್ಯೆ : ಎನ್‌ಐಎ ತನಿಖೆ ಆರಂಭ
ಶ್ರೀನಗರ, 29 ಜುಲೈ (ಹಿ.ಸ.) : ಆ್ಯಂಕರ್ : ಜಮ್ಮುವಿನ ಶ್ರೀನಗರದ ಹರ್ವಾನ್ ಮುಲ್ನಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಪಹಲ್ಗಾಮ್ ದಾಳಿಗೆ ನೇತೃತ್ವ ನೀಡಿದ್ದ ಭಯೋತ್ಪಾದಕ ಸುಲೇಮಾನ್ ಅಲಿಯಾಸ್ ಆಸಿಫ್ ಸೇರಿದಂತೆ ಮೂವರು ಉಗ್ರರು ಹತ್ಯೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ
ಪಹಲ್ಗಾಮ್ ದಾಳಿ ಉಗ್ರರ ಹತ್ಯೆ : ಎನ್‌ಐಎ ತನಿಖೆ ಆರಂಭ


ಶ್ರೀನಗರ, 29 ಜುಲೈ (ಹಿ.ಸ.) :

ಆ್ಯಂಕರ್ : ಜಮ್ಮುವಿನ ಶ್ರೀನಗರದ ಹರ್ವಾನ್ ಮುಲ್ನಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಪಹಲ್ಗಾಮ್ ದಾಳಿಗೆ ನೇತೃತ್ವ ನೀಡಿದ್ದ ಭಯೋತ್ಪಾದಕ ಸುಲೇಮಾನ್ ಅಲಿಯಾಸ್ ಆಸಿಫ್ ಸೇರಿದಂತೆ ಮೂವರು ಉಗ್ರರು ಹತ್ಯೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ಆರಂಭಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಪುನಃ ಸಕ್ರಿಯಗೊಂಡ ಮಾಹಿತಿ ಲಭಿಸಿದ ನಂತರ, ಸೇನೆ ಆಪರೇಷನ್ ಮಹಾದೇವ್ ಆರಂಭಿಸಿತು. ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಸುಲೇಮಾನ್ ಜೊತೆಗೆ ಜಿಬ್ರಾನ್ ಮತ್ತು ಹಮ್ಜಾ ಅಫ್ಘಾನಿ ಎಂಬ ಇಬ್ಬರು ಭಯೋತ್ಪಾದಕರು ಕೂಡ ಮೃತಪಟ್ಟಿದ್ದು. ಜಿಬ್ರಾನ್, ಕಳೆದ ಅಕ್ಟೋಬರ್‌ನಲ್ಲಿ ಗಗಂಗೀರ್‌ನ ಸುರಂಗ ಯೋಜನೆಯ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದನು.

ಎನ್‌ಕೌಂಟರ್ ಸ್ಥಳದಿಂದ ಎಂ4 ಕಾರ್ಬೈನ್, ಎರಡು ಎಕೆ ರೈಫಲ್‌ಗಳು ಹಾಗೂ ಇತರ ಶಸ್ತ್ರಾಸ್ತ್ರಗಳು ವಶಪಡಿಸಿಕೊಳ್ಳಲಾಗಿದೆ. ಶವಗಳನ್ನು ಪೊಲೀಸ್ ನಿಯಂತ್ರಣ ಕೊಠಡಿಗೆ ತರಲಾಗಿದ್ದು, ಎನ್‌ಐಎ ತಂಡ ಗುರುತಿನ ದೃಢೀಕರಣ ಹಾಗೂ ತಾಂತ್ರಿಕ ಸಾಕ್ಷ್ಯ ಸಂಗ್ರಹಣೆಯಲ್ಲಿ ತೊಡಗಿದೆ.

ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಇನ್ನಷ್ಟು ಉಗ್ರರ ಇರುವ ಕುರಿತು ಶೋಧ ಕಾರ್ಯ ಮುಂದುವರೆಸಿದ್ದು, ಶ್ರೀನಗರ ಮತ್ತು ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande