ವಿಜಯಪುರ, 29 ಜುಲೈ (ಹಿ.ಸ.) :
ಆ್ಯಂಕರ್ : ಕಲುಸಿತ ನೀರು ಸೇವಿಸಿ 30ಕ್ಕೂ ಅಧಿಕ ಜನ ಅಸ್ವಸ್ಥಗೊಂಡಿರುವ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬ್ಯಾಲಿಹಾಳ್ ಗ್ರಾಮದಲ್ಲಿ ನಡೆದಿದೆ.
ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ಜನರು ಅಸ್ವಸ್ಥಗೊಂಡಿದ್ದಾರೆ. ಇನ್ನು
ಮೂರು ದಿನಗಳಿಂದ ಗ್ರಾಮದಲ್ಲೇ ಎರಡು ಆಂಬುಲೇನ್ಸ್ ಗಳು ಉಳಿದುಕೊಂಡಿವೆ. ಗ್ರಾಮದಲ್ಲೇ ವೈದ್ಯರು ಬಿಡು ಬಿಟ್ಟಿದ್ದಾರೆ.
ಪಂಚಾಯತಿಯಿಂದ ಪೂರೈಕೆ ಮಾಡಿರುವ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥ ಆಗಿದ್ದಾರೆ. ಅಸ್ವಸ್ಥಗೊಂಡ ಜನರನ್ನು ವಿಜಯಪುರ, ಬಸವನ ಬಾಗೇವಾಡಿ, ಬಾಗಲಕೋಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ತೀವ್ರವಾಗಿ ಅಸ್ವಸ್ತಗೊಂಡ ಓರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಗ್ರಾಮಸ್ಥರ ಅಸ್ವಸ್ಥಗೊಂಡ ಕಾರಣ ಊರೇ ಖಾಲಿ ಖಾಲಿ ಆಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande