ಹೊ.ವೆ. ಶೇಷಾದ್ರಿ ಜನ್ಮ ಶತಮಾನೋತ್ಸವ ಸಂಸ್ಮರಣ ಕೃತಿ : ಸಹಭಾಗಿತ್ವಕ್ಕೆ ಆಹ್ವಾನ
ಬೆಂಗಳೂರು, 29 ಜುಲೈ (ಹಿ.ಸ.) : ಆ್ಯಂಕರ್ : ಹೊ.ವೆ. ಶೇಷಾದ್ರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಕಾರ್ಯವಾಹರಾಗಿ ಸೇವೆ ಸಲ್ಲಿಸಿದ ಮಹಾನ್ ಚಿಂತಕ, ಸಂಘಚೇತನ ಹಾಗೂ ಪ್ರೇರಣಾದಾಯಕ ನಾಯಕ. ಅವರ ಜನ್ಮ ಶತಮಾನೋತ್ಸವವನ್ನು ಅಮರಗೊಳಿಸುವ ಉದ್ದೇಶದಿಂದ, ಅವರ ವ್ಯಕ್ತಿತ್ವ ಹಾಗೂ ಜೀವನದ ಸ್ಮೃತಿಗಳನ್ನು ಸಂಕಲಿಸಿದ
Book


ಬೆಂಗಳೂರು, 29 ಜುಲೈ (ಹಿ.ಸ.) :

ಆ್ಯಂಕರ್ : ಹೊ.ವೆ. ಶೇಷಾದ್ರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಕಾರ್ಯವಾಹರಾಗಿ ಸೇವೆ ಸಲ್ಲಿಸಿದ ಮಹಾನ್ ಚಿಂತಕ, ಸಂಘಚೇತನ ಹಾಗೂ ಪ್ರೇರಣಾದಾಯಕ ನಾಯಕ. ಅವರ ಜನ್ಮ ಶತಮಾನೋತ್ಸವವನ್ನು ಅಮರಗೊಳಿಸುವ ಉದ್ದೇಶದಿಂದ, ಅವರ ವ್ಯಕ್ತಿತ್ವ ಹಾಗೂ ಜೀವನದ ಸ್ಮೃತಿಗಳನ್ನು ಸಂಕಲಿಸಿದ ಸಂಸ್ಮರಣ ಕೃತಿ ಹೊರ ತರಲು ನಿರ್ಧರಿಸಲಾಗಿದೆ ಎಂದು ದಿನೇಶ್ ಕಾಮತ್ ತಿಳಿಸಿದ್ದಾರೆ.

ಶೇಷಾದ್ರಿಯವರಿಂದ ಪ್ರೇರಣೆ ಪಡೆದ, ಅವರ ಕಾರ್ಯವೈಖರಿ, ವ್ಯಕ್ತಿತ್ವ, ಬುದ್ಧಿಮತ್ತೆ ಹಾಗೂ ಹಾಸ್ಯಚಟಾಕಿಗಳನ್ನು ಅನುಭವಿಸಿದ ಲಕ್ಷಾಂತರ ಕಾರ್ಯಕರ್ತರು ದೇಶ–ವಿದೇಶಗಳಲ್ಲಿ ಸಕ್ರಿಯರಾಗಿದ್ದಾರೆ. ನೀವು ಕೂಡ ಅವರ ಜೊತೆಗಿನ ನಿಮ್ಮ ಯಾವುದೇ ಸ್ಮರಣೀಯ ಅನುಭವ, ಭಾವಚಿತ್ರಗಳು, ಪತ್ರಗಳು, ಅಥವಾ ಧ್ವನಿಮುದ್ರಣಗಳನ್ನೂ ಹಂಚಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಇವುಗಳ ಮೂಲಕ ಶೇಷಾದ್ರಿಯವರ ಜೊತೆಗಿನ ಅನುಭವ ಸಾವಿರಾರು ಜನರ ಒಳಗಿಂದ ವ್ಯಕ್ತಿಯಾಗುವ ಅವರ ಅನನ್ಯತೆಯನ್ನು ಈ ಪುಸ್ತಕದಲ್ಲಿ ದಾಖಲಿಸಬಹುದು.

ನಿಮ್ಮ ಅನುಭವಗಳನ್ನು ಈ ಕೆಳಗಿನ ವಿಳಾಸಕ್ಕೆ ಶೀಘ್ರವಾಗಿ ಪೂರ್ಣ ಹೆಸರು ಮತ್ತು ಸಂಕ್ಷಿಪ್ತ ಪರಿಚಯ ಸೇರಿಸಿ ಕಳುಹಿಸಲು ಮನವಿ ಮಾಡಿದ್ದಾರೆ.

ವಿಳಾಸ :

ದಿನೇಶ್ ಕಾಮತ್

ಅಕ್ಷರಂ, 8ನೇ ಕ್ರಾಸ್, 2ನೇ ಹಂತ,

ಗಿರಿನಗರ, ಬೆಂಗಳೂರು – 560085

Email: dineshkamat@gmail.com

WhatsApp: 8072212254

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande