ರಾಯಚೂರು, 29 ಜುಲೈ (ಹಿ.ಸ.) :
ಆ್ಯಂಕರ್ : ಜೀವನ ಶೈಲಿಯ ಮತ್ತು ವರ್ತನೆಯ ಬದಲಾವಣೆಯಿಂದ ಅರಿವು ಮೂಡಿಸುವುದರ ಮೂಲಕ ಯಕೃತ್‌ನ ಆರೈಕೆಯನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸುರೇಂದ್ರ ಬಾಬು ಅವರು ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ವಿಭಾಗ, ರಾಷ್ಟಿçÃಯ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮದಡಿ ಜರುಗಿದ ವಿಶ್ವ ಹೆಪಟೈಟಿಸ್ ದಿನಾಚರಣೆ ಅಂಗವಾಗಿ ಸಿಬ್ಬಂದಿಯವರಿಗೆ ಹೆಪಟೈಟಿಸ್ ಲಸಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೆಪಟೈಟಿಸ್ ಸೋಂಕಿಗೆ ಅಸ್ಪತ್ರೆಯ ಸಿಬ್ಬಂದಿ ಒಳಗಾಗುವ ಸಾಧ್ಯತೆಗಳು ಇದ್ದು, ಈ ದಿಶೆಯಲ್ಲಿ ಲಸಿಕೆ ತಪ್ಪದೆ ಪಡೆಯಬೇಕಿದೆ. ಅಲ್ಲದೆ ಸುರಕ್ಷಿತ ರಕ್ತ, ಮತ್ತು ಅದರ ಉತ್ಪನ್ನಗಳ ಬಳಕೆ, ಸುರಕ್ಷಿತ ಚುಚ್ಚುಮದ್ದು ನೀಡುವಿಕೆ, ಸುರಕ್ಷಿತ ನೀರು, ಸ್ವಚ್ಚ ಶೌಚಾಲಯ ಬಳಸುವಿಕೆ, ಸುತ್ತಲಿನ ನೈರ್ಮಲ್ಯ ಕಾಪಾಡಲು ಅಧ್ಯತೆ ನೀಡಲು ಜಾಗೃತಿ ನೀಡಬೇಕು. ಅಲ್ಲದೆ ಮಕ್ಕಳು ಹುಟ್ಟಿನಿಂದ ಒಂದು ವರ್ಷದೊಳಗೆ ತಪ್ಪದೆ ಲಸಿಕೆ ಹಾಕಿಸಬೇಕೆಂದರು.
ಈ ವೇಳೆ ಕಾರ್ಯಕ್ರಮ ಕುರಿತು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ ಡಾ.ಮಹಮ್ಮದ್ ಶಾಕೀರ್ ಅವರು ಮಾತನಾಡಿ, ಕೆಲಸದ ಸ್ಥಳದಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಸಿಬ್ಬಂದಿಯವರಿಗೆ ಸೋಂಕು ತಡೆಗೆ ಮೊದಲ ಹಂತದಲ್ಲಿ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ. ಪ್ರಾಥಮಿಕ ಆರೋಗ್ಯ ಕಂದ್ರಗಳಲ್ಲಿಯ ತಜ್ಞವೈದ್ಯರು, ವೈದ್ಯರು, ಶೂಶ್ರುಷಣಾಧಿಕಾರಿ, ಪ್ರಯೋಗಾಲಯ ತಂತ್ರಜ್ಞರು, ಗ್ರುಪ್ ಡಿ ಸಿಬ್ಬಂದಿಯವರಿಗೆ ಎರಡನೆಯ ಹಂತದಲ್ಲಿ ಸಿಹೆಚ್‌ಓ, ಆಶಾ ಕಾರ್ಯಕರ್ತೆಯರಿಗೆ ಲಸಿಕೆಯನ್ನು ಮೊದಲ ದಿನ, ಒಂದು ತಿಂಗಳು, ಆರು ತಿಂಗಳು ಅವಧಿಯಲ್ಲಿ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ ಎಮ್ ಎನ್. ಡಬ್ಲ್ಯು.ಹೆಚ್.ಓ ಸರ್ವೇಕ್ಷಣಾ ವೈದ್ಯಾಧಿಕಾರಿ ಡಾ.ಅನಿಲ ಕುಮಾರ ತಾಳಿಕೋಟ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ್, ಜಿಲ್ಲಾ ಎನ್‌ವಿಬಿಡಿಸಿಪಿ ಅಧಿಕಾರಿ ಡಾ.ಚಂದ್ರಶೇಖರಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ಸೇರಿದಂತೆ ತಾಲೂಕಾ ಆರೋಗ್ಯಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು ತಾಲೂಕಾ ಅರೋಗ್ಯ ಮೇಲ್ವಿಚಾರಣಾ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್