ಸಿಲಿಗುರಿಯಲ್ಲಿ ನಕಲಿ ದಾಖಲೆಗಳೊಂದಿಗೆ ಚೀನಾ ಪ್ರಜೆ ಬಂಧನ
ಕೋಲ್ಕತ್ತಾ, 29 ಜುಲೈ (ಹಿ.ಸ.) : ಆ್ಯಂಕರ್ : ಪಶ್ಚಿಮ ಬಂಗಾಳದ ಸಿಲಿಗುರಿಯ ಪನಿಟಾಂಕಿ ಪ್ರದೇಶದ ಭಾರತ-ನೇಪಾಳ ಗಡಿಯಲ್ಲಿ ನಕಲಿ ದಾಖಲೆಗಳೊಂದಿಗೆ ಚೀನಾದ ಪ್ರಜೆನೊಬ್ಬನನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ. ಖೋಡಿಬರಿ ಪೊಲೀಸ್ ಠಾಣೆ ಮತ್ತು ಎಸ್‌ಎಸ್‌ಬಿ 41ನೇ ಬೆಟಾಲಿಯನ್ ''ಸಿ'' ಕಂಪನಿ ಜಂಟಿಯಾಗಿ ಈ ಕ
ಸಿಲಿಗುರಿಯಲ್ಲಿ ನಕಲಿ ದಾಖಲೆಗಳೊಂದಿಗೆ ಚೀನಾ ಪ್ರಜೆ ಬಂಧನ


ಕೋಲ್ಕತ್ತಾ, 29 ಜುಲೈ (ಹಿ.ಸ.) :

ಆ್ಯಂಕರ್ : ಪಶ್ಚಿಮ ಬಂಗಾಳದ ಸಿಲಿಗುರಿಯ ಪನಿಟಾಂಕಿ ಪ್ರದೇಶದ ಭಾರತ-ನೇಪಾಳ ಗಡಿಯಲ್ಲಿ ನಕಲಿ ದಾಖಲೆಗಳೊಂದಿಗೆ ಚೀನಾದ ಪ್ರಜೆನೊಬ್ಬನನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ. ಖೋಡಿಬರಿ ಪೊಲೀಸ್ ಠಾಣೆ ಮತ್ತು ಎಸ್‌ಎಸ್‌ಬಿ 41ನೇ ಬೆಟಾಲಿಯನ್ 'ಸಿ' ಕಂಪನಿ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ.

ಬಂಧಿತನ ಬಳಿ ಎರಡು ಸ್ವಿಸ್ ಪಾಸ್‌ಪೋರ್ಟ್‌ಗಳು ಮತ್ತು ನಕಲಿ ನೇಪಾಳಿ ಪೌರತ್ವ ದಾಖಲೆ ಪತ್ತೆಯಾಗಿವೆ. ಆತನು ನಿಜವಾಗಿ ಚೀನಾದ ಪ್ರಜೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಬಂಧಿತನು ಯಾವ ಮಾರ್ಗದಿಂದ ಭಾರತ ಪ್ರವೇಶಿಸಿದ, ಅವನ ಉದ್ದೇಶವೇನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.

ಘಟನೆಯು ಸಾಮಾನ್ಯ ಒಳನುಸುಳುವಿಕೆ ಅಲ್ಲ, ದೊಡ್ಡ ಅಂತಾರಾಷ್ಟ್ರೀಯ ಪಿತೂರಿಯ ಭಾಗವಿರಬಹುದೆಂದು ಶಂಕಿಸಲಾಗಿದೆ. ಕೇಂದ್ರ ಗುಪ್ತಚರ ಸಂಸ್ಥೆಗಳು ಮತ್ತು ಭದ್ರತಾ ದಳಗಳು ತನಿಖೆ ಆರಂಭಿಸಿದ್ದು, ಭಾರತ-ನೇಪಾಳ ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande