ಬಳ್ಳಾರಿ ಪಾಲಿಕೆ ಕಸ ಸಂಗ್ರಹದ ವಾಹನ ಡಿಕ್ಕಿ- ಮಗು ಸಾವು
ಬಳ್ಳಾರಿ, 29 ಜುಲೈ (ಹಿ.ಸ.) : ಆ್ಯಂಕರ್ : ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನ‌ ಮೇಲೆ ಬಳ್ಳಾರಿ ಮಹಾನಗರ ಪಾಲಿಕೆಯ ಕಸ ಸಂಗ್ರಹಿಸುವ ವಾಹನ ಡಿಕ್ಕಿ ಹೊಡೆದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಿಗ್ಗೆ ಬಾಪೂಜಿ ನಗರದಲ್ಲಿ ನಡೆದಿದೆ. ವಿಕ್ಕಿ (02) ಮೃತ ಮಗು. ಸಮರ ಮತ್ತು ಶೈಲಜಾ ದಂ
ಬಳ್ಳಾರಿ ಪಾಲಿಕೆ ಕಸ ಸಂಗ್ರಹದ ವಾಹನ ಡಿಕ್ಕಿ- ಮಗು ಸಾವು


ಬಳ್ಳಾರಿ, 29 ಜುಲೈ (ಹಿ.ಸ.) :

ಆ್ಯಂಕರ್ : ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನ‌ ಮೇಲೆ ಬಳ್ಳಾರಿ ಮಹಾನಗರ ಪಾಲಿಕೆಯ ಕಸ ಸಂಗ್ರಹಿಸುವ ವಾಹನ ಡಿಕ್ಕಿ ಹೊಡೆದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಿಗ್ಗೆ ಬಾಪೂಜಿ ನಗರದಲ್ಲಿ ನಡೆದಿದೆ.

ವಿಕ್ಕಿ (02) ಮೃತ ಮಗು. ಸಮರ ಮತ್ತು ಶೈಲಜಾ ದಂಪತಿಯ ಮಗು. ಮನೆಯ ಮುಂದೆ ಆಟವಾಡ್ತಿದ್ದ ಮಗುವಿನ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಕಸ ಸಂಗ್ರಹಿಸುವ ವಾಹನ ಹರಿದಿದೆ‌. ಕಾರಣ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande