ಆಗಸ್ಟ್ 02 : `ಹಾಡಿರೇ ರಾಗಗಳ - ತೂಗಿರೇ ದೀಪಗಳ’ ಗಾಯನ
ಬಳ್ಳಾರಿ, 29 ಜುಲೈ (ಹಿ.ಸ.) : ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯಡಿ `ಹಾಡಿರೇ ರಾಗಗಳ-ತೂಗಿರೇ ದೀಪಗಳ’ ಸಂಗೀತ ಗಾಯನ ಆಗಸ್ಟ್ 02 ರಂದು ಸಂಜೆ 06 ಗಂಟೆಗೆ ಸಾಂಸ್ಕ್ರತಿಕ ಸಮುಚ್ಚಯದಲ್ಲಿರುವ ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ಬಯಲು ರಂಗಮಂದಿರದ
ಆಗಸ್ಟ್ 02 : `ಹಾಡಿರೇ ರಾಗಗಳ - ತೂಗಿರೇ ದೀಪಗಳ’ ಗಾಯನ


ಬಳ್ಳಾರಿ, 29 ಜುಲೈ (ಹಿ.ಸ.) :

ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯಡಿ `ಹಾಡಿರೇ ರಾಗಗಳ-ತೂಗಿರೇ ದೀಪಗಳ’ ಸಂಗೀತ ಗಾಯನ ಆಗಸ್ಟ್ 02 ರಂದು ಸಂಜೆ 06 ಗಂಟೆಗೆ ಸಾಂಸ್ಕ್ರತಿಕ ಸಮುಚ್ಚಯದಲ್ಲಿರುವ ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ.

ಬಳ್ಳಾರಿಯ ಎಸ್.ಎಂ. ಹುಲುಗಪ್ಪ ಅವರ ತಂಡದಿಂದ ಜಾನಪದ ಗೀತೆಗಳು, ಸಿರುಗುಪ್ಪದ ಅಂಬಣ್ಣ ದಳವಾಯಿ ಅವರಿಂದ ಸುಗಮ ಸಂಗೀತ, ಬಳ್ಳಾರಿಯ ಕೆ. ಜಡೇಶ್ ಅವರಿಂದ ಭಾವ ಗೀತೆಗಳು, ಸಿರುಗುಪ್ಪ ತಾಲ್ಲೂಕಿನ ಉತ್ತನೂರಿನ ರಾಮಪ್ಪ ಅವರಿಂದ ರಂಗ ಗೀತೆಗಳು, ಕುರುಗೋಡು ತಾಲ್ಲೂಕಿನ ಕಲ್ಲುಕಂಬದ ಬಿ. ಆನಂದ ಅವರಿಂದ ಕ್ರಾಂತಿ ಗೀತೆಗಳು, ಸಂಗನಕಲ್ಲಿನ ಉಷಾ ಅವರಿಂದ ವಚನ ಗೀತೆಗಳು, ಯರ್ರಗುಡಿಯ ಸುಂಕಪ್ಪ ಹೆಚ್.ಜಿ ಅವರಿಂದ ಹೋರಾಟ ಗೀತೆಗಳು, ಇಬ್ರಾಹಿಂಪುರದ ಹೆಚ್. ಯರ್ರಿಸ್ವಾಮಿ ಅವರಿಂದ ಕ್ರಾಂತಿ ಗೀತೆಗಳು, ಕುರುಗೋಡಿನ ಕೆ. ಹನುಮಂತಪ್ಪ ಜೋಗಿ ಅವರಿಂದ ಕಿನ್ನರಿ ಜೋಗಿ ಪದಗಳು, ಕಂಪ್ಲಿ ತಾಲ್ಲೂಕಿನ ಮೆಟ್ರಿಯ ಸಿ.ಡಿ.ಮೌನೇಶ್ ಅವರಿಂದ ತತ್ವಪದ ಮತ್ತು ದಾಸರ ಪದಗಳು, ಸಂಡೂರು ತಾಲ್ಲೂಕಿನ ಭುಜಂಗನಗರದ ತಾಯಪ್ಪ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಸಂಗನಕಲ್ಲಿನ ಮಾರೆಮ್ಮ ಅವರಿಂದ ಸಂಪ್ರದಾಯ ಗೀತೆಗಳು, ಸಿರುಗುಪ್ಪ ತಾಲ್ಲೂಕಿನ ಅರಳಿಗನೂರಿನ ನೀಲಗಂಗಮ್ಮ ಅವರಿಂದ ಶೋಭಾನೆ ಪದಗಳು ಸೇರಿದಂತೆ ಸಂಗೀತ ಗಾಯನ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande