ಗದಗ, 29 ಜುಲೈ (ಹಿ.ಸ.) :
ಆ್ಯಂಕರ್ : ಮನುಷ್ಯ ಬದುಕಲು ದುಡಿಯಬೇಕು. ಹಾಗೂ ಪ್ರಾಮಾಣಿಕವಾಗಿ ದುಡಿದು ತಿನ್ನಬೇಕು. ದುರಾಸೆಯಿಂದ ಮಾಮ ಮಾರ್ಗದಿಂದ ಗಳಿಸಿದರೆ ಅದು ದಕ್ಕುವದಿಲ್ಲ, ಪ್ರತಿಯೊಬ್ಬರಿಗೂ ಆಸೆ ಇರುತ್ತದೆ. ಸನ್ಯಾಸಿಗಳಿಗೂ ಕೂಡಾ ಆಸೆಗಳು ಇರುತ್ತವೆ. ಮನುಷ್ಯನಿಗೆ ಆಸೆ ಇರಬೇಕು. ಆದರೆ ದುರಾಸೆ ಇರಬಾರದು ಎಂದು ಆಧ್ಯಾತ್ಮ ವಿದ್ಯಾಶ್ರಮದ ಶರಣೆ ನೀಲಮ್ಮ ತಾಯಿಯವರು ಹೇಳಿದರು.
ಅವರಿಂದ ಗದಗ ನಗರದ ಶ್ರೀ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದಿರುವ ಶ್ರಾವಣ ಮಾಸದ ಪ್ರಯುಕ್ತ ಶರಣ ಚರಿತಾಮೃತ ಪ್ರವಚನದಲ್ಲಿ ಮಾತನಾಡುತ್ತ, ನಮ್ಮ ಆಸೆಗಳು, ಅವು ನಿಲುಕುವಂತಿರಬೇಕು, ಮತ್ತೊಬ್ಬರ ದುಡ್ಡಿನ ಮೇಲೆ ಆಸ್ತಿಯ ಮೇಲೆ, ಪರಸ್ತ್ರಿಯರ ಮೇಲೆ ದುರಾಸೆ ಇರಬಾರದು. ಎಲೆಗೆ ಸುಣ್ಣವನ್ನು ಸಣ್ಣ ಪ್ರಮಾಣದಲ್ಲಿ ಹಚ್ಚಿದರು ನಾಲಿಗೆ ಸುಡುವದಿಲ್ಲ. ಅಡಿಕೆ ಬೆಟ್ಟದಷ್ಟು ಸುಣ್ಣವನ್ನು ತಿಂದರೆ ಬಾಯಿ ಸುಡುವದು. ಅದೇ ರೀತಿ ತನ್ನದಲ್ಲದ ವಸ್ತುವನ್ನು ಪಡೆಯಲು ಹೋದರೆ ಅಡಿಕೆ ಬೆಟ್ಟದಷ್ಟು ಸುಣ್ಣವನ್ನು ತಿಂದರೆ ಹೇಗೆ ಬಾಯಿ ಸುಡುವದೋ ಹಾಗೆ ದುರಾಸೆಯಿಂದ ಬೇರೆಯವರ ಹಣ ವಸ್ತುಗಳನ್ನು ಕದ್ದರೆ ಶಾಪ ಕಟ್ಟಿಟ್ಟಬುತ್ತಿ ಎಂದರು.
ಪುರಾಣ ಪ್ರವಚನಗಳು ಮನುಷ್ಯರಿಗೆ ಇರುತ್ತವೆ. ಪಶು ಪಕ್ಷಿಗಳಿಗೆ ಪುರಾಣ ಪ್ರವಚನಗಳು ಇರುವದಿಲ್ಲ. ದುರಾಸೆ ದುಃಖಕ್ಕೆ ಕಾರಣ. ಆದಿ ಮಾನವ ಮೊದಲು ಬಟ್ಟೆ ಇಲ್ಲದೇ, ಗಡ್ಡೆಗೆಣಸುಗಳನ್ನು ತಿಂದು ಬದುಕುತ್ತಿದ್ದನು. ಗಿಡದ ತಪ್ಪಲಿನಿಂದ ತಮ್ಮ ದೇಹಗಳನ್ನು ಮುಚ್ಚಿಕೊಳ್ಳುತ್ತಿದ್ದರು. ಮನುಷ್ಯರು ಈಗ ತುಂಬಾ ಬದಲಾಗಿದ್ದಾರೆ. ಮನುಷ್ಯರು ಈಗ ವೈಜ್ಞಾನಿಕವಾಗಿ ಬಹಳ ಮುಂದುವರೆದಿದ್ದಾರೆ. ಪ್ರತಿಯೊಬ್ಬರಿಗೂ ಈಗ ಶಾಂತಿ, ನೆಮ್ಮದಿ ಬೇಕಾಗಿದೆ. ಶಾಂತಿ, ನೆಮ್ಮದಿ ಪಡೆಯಲು ಪುರಾಣ ಪ್ರವಚನಗಳನ್ನು ಕೇಳಬೇಕು. ಶರಣರು ಹಾಕಿಕೊಟ್ಟ ದಾರಿಯಲ್ಲಿ ಬದುಕಬೇಕು. 12ನೇ ಶತಮಾನದ ಕಲ್ಯಾಣದಲ್ಲಿ ಶರಣರ ಬಳಗವೇ ಇತ್ತು. ಮಾಡುವ ಕಾಯಕ ಮೋಸ ವಂಚನೆಯಿಂದ ಇರಬಾರದು ಎಂದು ಹೇಳಿದರು.
ಸಂತೋಷಕ್ಕೆ ಸಂಪತ್ತು ಅಧಿಕಾರ ಮುಖ್ಯವಲ್ಲ. ಭಗಂತ ಕೊಟ್ಟಿದ್ದಲ್ಲೇ ಸಂತೋಷ ಪಡಬೇಕು. ಎಷ್ಟು ಗಳಿಸಿದರೂ ನೆಮ್ಮದಿ ಇರುವುದಿಲ್ಲಾ. ಆದರೆ ಇದ್ದುದರಲ್ಲಿಯೇ ಸಂತೃಪ್ತಿ ಪಡೆಯಬೇಕು. ಆಯುಷ್ಯ ಇರುವುದರೊಳಗೇ ದೇವರನ್ನು ವಲಿಸಿಕೊಳ್ಳಬೇಕು. ಆಯುಷ್ಯ ದುಡಿದರೂ ಹೋಗುತ್ತೇ, ಖಾಲಿ ಕುಳಿತುಕೊಂಡರೂ ಹೋಗುತ್ತೇ. ಆಯುಷ್ಯ ಇರುವುದರೊಳಗೆ ಸಮಾಜ ನೆನೆಯುವಂತೆ ಬದುಕಬೇಕು. ನಮಗೆ ಸಿಕ್ಕೆ ಆಯುಷ್ಯವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯರಾದ ಎಮ್.ಎಮ್.ಹಿರೇಮಠ ವಕೀಲರು, ಪ್ರವಚನ ಸಮೀತಿ ಅಧ್ಯಕ್ಷರಾದ ಶೇಖಪ್ಪ ಹೊಂಬಳ, ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ಅರಳಿ, ವಿರುಪಾಕ್ಷಪ್ಪ ಅಕ್ಕಿ, ಗಂಗಾಧರ ನಂದಿಕೋಲಮಠ, ಶಂಕರ ನೀರಲಕೇರಿ, ಸುರೇಶ ಮಾಳವಾಡ, ಪಂಚಾಕ್ಷರಿ ಅಂಗಡಿ, ನಾಗಪ್ಪ ಕರಿಗಾರ, ಗಂಗಾಧರ ಮೇಲಗಿರಿ, ಬಸವರಾಜ ಜಂತ್ಲಿ, ಜೈಶು ಜೋಷಿ, ರಾಚಪ್ಪ ಮಲ್ಲಾಪೂರ, ಸುಭಾಸ ಹವಳೆ, ಪ್ರಭು ಶೆಟ್ಟರ, ಶ್ರೀಮತಿ ಸುನಂದಾ ಜೋಬಾಳೆ, ಬೀನಾ ಮಾನ್ವಿ, ಕಸ್ತೂರಕ್ಕಾ ಮಾನ್ವಿ, ಅನಸಕ್ಕಾ ಮೇಲಗಿರಿ, ಕಲ್ಪನಾ ಹಿರೇಮಠ, ಶೈಲಾ ಮಾನ್ವಿ, ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP