ಚೇಳ್ಳಗುರ್ಕಿ : ಗಮಕ ಕಲಾನಿಧಿ ಡಾ. ಜೋಳದರಾಶಿ ದೊಡ್ಡನಗೌಡರ 116ನೇ ಜಯಂತಿ
ಚೇಳ್ಳಗುರ್ಕಿ, 29 ಜುಲೈ (ಹಿ.ಸ.) : ಆ್ಯಂಕರ್ : ಚೇಳ್ಳಗುರ್ಕಿ ಶ್ರೀ ಎರ್ರಿತಾತ ಅವರ ಜೀವಸಮಾದಿ ಕ್ಷೇತ್ರದಲ್ಲಿ ಬಳ್ಳಾರಿಯ ರಂಗ ತೋರಣ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ ಹಾಗೂ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಜಂಟಿಯಾಗಿ ಏರ್ಪಡಿಸಿದ್ದ ಡಾ. ಜೋಳದರಾಶಿ ದೊಡ್ಡನಗೌಡ 116 ನೇ ಜಯಂತಿಯನ್ನು `ರಂಗ ಜ
ಚೇಳ್ಳಗುರ್ಕಿ : ಗಮಕ ಕಲಾನಿಧಿ ಡಾ. ಜೋಳದರಾಶಿ ದೊಡ್ಡನಗೌಡರ 116ನೇ ಜಯಂತಿ


ಚೇಳ್ಳಗುರ್ಕಿ, 29 ಜುಲೈ (ಹಿ.ಸ.) :

ಆ್ಯಂಕರ್ : ಚೇಳ್ಳಗುರ್ಕಿ ಶ್ರೀ ಎರ್ರಿತಾತ ಅವರ ಜೀವಸಮಾದಿ ಕ್ಷೇತ್ರದಲ್ಲಿ ಬಳ್ಳಾರಿಯ ರಂಗ ತೋರಣ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ ಹಾಗೂ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಜಂಟಿಯಾಗಿ ಏರ್ಪಡಿಸಿದ್ದ ಡಾ. ಜೋಳದರಾಶಿ ದೊಡ್ಡನಗೌಡ 116 ನೇ ಜಯಂತಿಯನ್ನು `ರಂಗ ಜ್ಯೋತಿ'ಯನ್ನು ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.

ನಂತರ, ಡಾ. ಜೋಳದರಾಶಿ ದೊಡ್ಡನಗೌಡ ಅವರ ಸಮಾಧಿ ಸ್ಥಳದಲ್ಲಿ ಪೂಜೆ ಸಲ್ಲಿಸಿ ಭಜನೆ ಹಾಡುಗಳನ್ನು ಹಾಡಲಾಯಿತು. ಡಾ. ಜೋಳದರಾಶಿ ದೊಡ್ಡನಗೌಡ ಆವರ ಮನೆಯಲ್ಲಿ ಗಮಕ ಮತ್ತು ವಿವಿಧ ಸಂಗೀತ ಕಾರ್ಯಕ್ರಮಗಳು ನಡೆದವು.

ಪ್ರತಿಷ್ಠಾನ ಅಧ್ಯಕ್ಷ ಕೆ. ಪೆÇಂಪನಗೌಡ, ರಂಗತೋಣ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ, ಬಳ್ಳಾರಿ ಜಿಲ್ಲೆ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಕಾರ್ಯದರ್ಶಿ ಮುದ್ದಟನೂರು ತಿಪ್ಪೇಸ್ವಾಮಿ, ಖಜಾಂಚಿ ರಮಣಪ್ಪ ಭಜಂತ್ರಿ, ಸಹ ಕಾರ್ಯದರ್ಶಿಗಳಾದ ಸುಬ್ಬಣ್ಣ, ವೀರೇಶ ದಳಾವಾಯಿ, ಎಮ್ಮಿಗನೂರು ಜಡೆಪ್ಪ, ಶಿವೇಶ್ವರಗೌಡ ಕಲ್ಲು ಕಂಭ, ಜೋಳದರಾಶಿ ಬಸವರಾಜ, ಅಮರೇಶ, ನಾಗನಗೌಡ, ಶಿವರುದ್ರಸ್ವಾಮಿ, ವಿರುಪಾಕ್ಷಪ್ಪ, ಸಿಂದುವಾಳ ಶಶಿ, ಕೊಟ್ರಪ್ಪ , ಹುಸೇನ್, ಸುಂಕಪ್ಪ, ಕುಮಾರಗೌಡ, ಜಯಣ್ಣ, ವನ್ನೂರ ಸ್ವಾಮಿ ಹಾಗೂ ಜೋಳದರಾಶಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande