ಬುದ್ಧ ಅಮರನಾಥ ಯಾತ್ರೆಗೆ ಲೆ. ಗವರ್ನರ್ ಮನೋಜ್ ಸಿನ್ಹಾ ಹಸಿರು ನಿಶಾನೆ
ಜಮ್ಮು, 28 ಜುಲೈ (ಹಿ.ಸ.) : ಆ್ಯಂಕರ್ : ಬುದ್ಧ ಅಮರನಾಥ ಯಾತ್ರೆಯ ಮೊದಲ ತಂಡಕ್ಕೆ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸೋಮವಾರ ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬುದ್ಧ ಅಮರನಾಥನಿಗೆ ಪವಿತ್ರ ಯಾತ್ರೆಯು ಭಕ್ತರಿಗೆ ಜ
Yatra


ಜಮ್ಮು, 28 ಜುಲೈ (ಹಿ.ಸ.) :

ಆ್ಯಂಕರ್ : ಬುದ್ಧ ಅಮರನಾಥ ಯಾತ್ರೆಯ ಮೊದಲ ತಂಡಕ್ಕೆ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸೋಮವಾರ ಹಸಿರು ನಿಶಾನೆ ತೋರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬುದ್ಧ ಅಮರನಾಥನಿಗೆ ಪವಿತ್ರ ಯಾತ್ರೆಯು ಭಕ್ತರಿಗೆ ಜ್ಞಾನೋದಯದ ಅನುಭವವನ್ನೂ, ಆಧ್ಯಾತ್ಮಿಕ ತೃಪ್ತಿಯನ್ನೂ ಒದಗಿಸುತ್ತದೆ. ಇದು ಜೀವನದ ರಹಸ್ಯಗಳನ್ನು ಬಹಿರಂಗಪಡಿಸುವ ಪವಿತ್ರ ಪ್ರಯಾಣ ಎಂದು ಹೇಳಿದರು.

ಅವರು ಯಾತ್ರಿಕರಿಗೆ ಸುರಕ್ಷಿತ ಮತ್ತು ಶ್ರದ್ಧಾ-ಭಕ್ತಿಯಿಂದ ಕೂಡಿದ ಯಾತ್ರೆಯ ಹಾರೈಕೆ ನೀಡಿದರು. ಬಾಬಾ ಅಮರನಾಥ ಮತ್ತು ಬುದ್ಧ ಅಮರನಾಥ ಯಾತ್ರಾ ನ್ಯಾಸ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಲಂಗರ್ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ನಿಖರ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಶ್ಲಾಘಿಸಿದರು.

ಪ್ರಸ್ತುತ, ದೇಶದ ವಿಭಿನ್ನ ರಾಜ್ಯಗಳಿಂದ ಆಗಮಿಸಿದ 1000 ಕ್ಕೂ ಹೆಚ್ಚು ಯಾತ್ರಿಕರು ಮೊದಲ ತಂಡದ ಭಾಗವಾಗಿದ್ದು, ಇದುವರೆಗೆ 3.77 ಲಕ್ಷಕ್ಕೂ ಹೆಚ್ಚು ಭಕ್ತರು ಅಮರನಾಥ ಗುಹೆಗೆ ಭೇಟಿ ನೀಡಿದ್ದಾರೆ ಎಂದು ಲೆ. ಗವರ್ನರ್ ಮಾಹಿತಿ ನೀಡಿದರು.

“ಭಾರತದ ಎಲ್ಲೆಡೆಗಳಿಂದ ಭಕ್ತರು ಬಾಬಾ ಬೃಹಮೇಶ್ವರ್ ಅರ್ಥಾತ್ ಬುದ್ಧ ಅಮರನಾಥನ ದರ್ಶನಕ್ಕಾಗಿ ಬರುತ್ತಿದ್ದಾರೆ. ಅವರು ಜಮ್ಮು-ಕಾಶ್ಮೀರ ಮತ್ತು ರಾಷ್ಟ್ರದ ಶಾಂತಿ-ಸೌಹಾರ್ದಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ ಎಂಬುದು ನಮ್ಮ ಧರ್ಮಸಾಂಸ್ಕೃತಿಕ ಪರಂಪರೆಯ ಘನತೆ,” ಎಂದು ಮನೋಜ್ ಸಿನ್ಹಾ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande