ಮಣಿಪುರದಲ್ಲಿ ಐವರು ಉಗ್ರರು ಬಂಧನ
ಇಂಫಾಲ್, 28 ಜುಲೈ (ಹಿ.ಸ.) : ಆ್ಯಂಕರ್ : ಮಣಿಪುರದ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಹಾಗೂ ತೌಬಲ್ ಜಿಲ್ಲೆಗಳಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ಐವರು ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಸುಲಿಗೆ, ಬೆದರಿಕೆ ಹಾಗೂ ಅಪಹರಣದ ಪ್ರಕರಣಗಳಲ್ಲಿ ಆರೋಪಿಗಳಾಗಿದ
Arrest


ಇಂಫಾಲ್, 28 ಜುಲೈ (ಹಿ.ಸ.) :

ಆ್ಯಂಕರ್ : ಮಣಿಪುರದ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಹಾಗೂ ತೌಬಲ್ ಜಿಲ್ಲೆಗಳಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ಐವರು ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಸುಲಿಗೆ, ಬೆದರಿಕೆ ಹಾಗೂ ಅಪಹರಣದ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.

ಬಂಧಿತರಲ್ಲಿ ಮೂವರು ಕನ್ಗ್ಲೈಪಾಕ್ ಕಮ್ಯುನಿಸ್ಟ್ ಪಕ್ಷದ ಸದಸ್ಯರು, ಓರ್ವ ಕೆವೈಕೆಎಲ್-ಸೊರೆಪಾ ಬಣದ ಸದಸ್ಯ ಮತ್ತು ಇನೋರ್ವ ಕೆಸಿಪಿ (ಎಂಎಫ್‌ಎಲ್) ಸಂಘಟನೆಗೆ ಸೇರಿದ್ದಾರೆ.

ಬಂಧಿತರಿಂದ ಮೊಬೈಲ್‌ಗಳು, ಗುರುತಿನ ಚೀಟಿಗಳು ಮತ್ತು ನಗದು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande