ಶಿವನಿಗೆ ಬುತ್ತಿ ಪೂಜೆ ಸಲ್ಲಿಸಿ ಕೃತಜ್ಞತೆ ಸಲ್ಲಿಸಿದ ಭಕ್ತರು
ವಿಜಯಪುರ, 28 ಜುಲೈ (ಹಿ.ಸ.) : ಆ್ಯಂಕರ್ : ಭಾರತೀಯ ಪುಣ್ಯ ಭೂಮಿಯಲ್ಲಿ ಹಲವು ಆಚರಣೆಗಳು ಬೆಳೆದು ಬಂದಿವೆ. ಹಿಂದೂಗಳಿಗೆ ಶ್ರಾವಣ ಮಾಸ ಅತ್ಯಂತ ಪವಿತ್ರವಾದದ್ದು. ಮಠ ಮಂದಿರಗಳಲ್ಲಿ ಶಿವನಾಮ ಸ್ಮರಣೆ ಸತ್ಕಥಾ ಶ್ರವಣಗಳು ನಡೆಯುತ್ತಾ ಬಂದಿವೆ. ಇಂದು ಶ್ರಾವಣ ಮಾಸದ ಮೊದಲ ಸೋಮವಾರದ ಹಿನ್ನೆಲೆಯಲ್ಲಿ ಬಸವ ನಾಡ
ಶಿವ


ವಿಜಯಪುರ, 28 ಜುಲೈ (ಹಿ.ಸ.) :

ಆ್ಯಂಕರ್ : ಭಾರತೀಯ ಪುಣ್ಯ ಭೂಮಿಯಲ್ಲಿ ಹಲವು ಆಚರಣೆಗಳು ಬೆಳೆದು ಬಂದಿವೆ. ಹಿಂದೂಗಳಿಗೆ ಶ್ರಾವಣ ಮಾಸ ಅತ್ಯಂತ ಪವಿತ್ರವಾದದ್ದು. ಮಠ ಮಂದಿರಗಳಲ್ಲಿ ಶಿವನಾಮ ಸ್ಮರಣೆ ಸತ್ಕಥಾ ಶ್ರವಣಗಳು ನಡೆಯುತ್ತಾ ಬಂದಿವೆ.

ಇಂದು ಶ್ರಾವಣ ಮಾಸದ ಮೊದಲ ಸೋಮವಾರದ ಹಿನ್ನೆಲೆಯಲ್ಲಿ ಬಸವ ನಾಡು ವಿಜಯಪುರದಲ್ಲಿ ದೇಗುಲಗಳು ಭಕ್ತರಿಂದ ತುಂಬಿ ಹೋಗಿದ್ದವು.

ದೇಗುಲಗಳಲ್ಲಿ ಭಕ್ತರು ತಮ್ಮ ಇಷ್ಟ ದೇವರ ದರ್ಶನ ಪಡೆದು ಕೃತಾರ್ಥರಾದರು. ಹೌದು.. ಹಿಂದೂಗಳಿಗೆ ಅತ್ಯಂತ ಪವಿತ್ರ ಮಾಸ ಎಂದರೆ ಶ್ರಾವಣ ಮಾಸ. ಶ್ರಾವಣ ಮಾಸವು ಜುಲೈ 25ರಿಂದ ಆರಂಭವಾಗಿದೆ. ಇದು ಶಿವನ ಆರಾಧನೆಗೆ ಮಹತ್ವದ ಸಮಯವಾಗಿದೆ.

ಮಹಾ ಮೃತ್ಯುಂಜಯ ಮಂತ್ರ ಪಠಿಸುವುದು ಶುಭಕರ. ಹಾಗೆಯೇ ಶ್ರಾವಣ ಸೋಮವಾರಗಳಲ್ಲಿ ಉಪವಾಸ ವ್ರತ ಮತ್ತು ಶಿವನ ಪೂಜೆ ವಿಶೇಷವಾಗಿದೆ. ಹೀಗಾಗಿ ವಿಜಯಪುರ ನಗರದ ಹೊರವಲಯದ ಶಿವಗಿರಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ಚಿತ್ರ ನಿರ್ಮಾಪಕ ಬಸಂತ ಕುಮಾರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಟಿ. ಕೆ ಪಾಟೀಲ್ ಬೆನಕಟ್ಟಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿರುವ ಶಿವಗಿರಿಯು 85 ಅಡಿ ಎತ್ತರದ(25ಮೀ) ಶಿವನ ಪ್ರತಿಮೆ.

ಈ ಕ್ಷೇತ್ರ ಇದೀಗ ಭಕ್ತರ ಪಾಲಿಗೆ ಆರಾಧನೆಯ ಕ್ಷೇತ್ರವಾಗುತ್ತಿದೆ. ಪ್ರತಿದಿನ ನೂರಾರು ಭಕ್ತರು ಆಗಮಿಸಿ ಶಿವನ ದರ್ಶನ ಪಡೆಯುತ್ತಿದ್ದಾರೆ.

ಹಚ್ಚ ಹಸುರಿನ ಸಸ್ಯಕಾಶಿಯಲ್ಲಿ ಕಂಗೊಳಿಸುವ ಶಿವನ ಮೂರ್ತಿಯನ್ನು ಕಣ್ತುಂಬಿಕೊಳ್ಳುವದೇ ಮಹಾದಾನಂದ.

ಇಲ್ಲಿ ಪ್ರತಿದಿನ ಅನ್ನ ದಾಸೋಹ ಹಾಗೂ ಭಕ್ತಿ ದಾಸೋಹ ನಡೆಸಲಾಗುತ್ತಿದೆ. ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಲಿಂಗಕ್ಕೆ ರುದ್ರಾಭಿಷೇಕ, ಪಂಚಫಲಾಭಿಷೇಕ,ಬುತ್ತಿ ಪೂಜೆ, ಅಲಂಕಾರ ಪೂಜೆ ಸೇರಿದಂತೆ ಅಲಂಕಾರ ಪೂಜೆಗಳು ಭಕ್ತರ ಕಣ್ಮನ ಸೆಳೆದವು.

ನೂರಾರು ಭಕ್ತರು ಆಗಮಿಸಿ ಶಿವನ ದರ್ಶನ ಪಡೆದರು. ಇನ್ನೂ ಶಿವಗಿರಿಯಲ್ಲಿ ಬುತ್ತಿ ಪೂಜೆ ಎಂಬ ಪೂಜೆ ವಿಶಿಷ್ಟ ಪೂಜೆ ಸಲ್ಲಿಸಲಾಗುತ್ತದೆ.

ಶಿವನಿಗೆ ಬುತ್ತಿ ಪೂಜೆ ಮಾಡಿಸುವದರಿಂದ ಭಕ್ತರ ಮನೋಕಾಮನೆ ಈಡೇರಿಸುವದರ ಜೊತೆಗೆ ಶಿವ ಪಾರ್ವತಿ ದೇವಿ ಇಬ್ಬರು ಕುಟುಂಬಕ್ಕೆ ಅಷ್ಟ ಐಶ್ವರ್ಯ ಕೊಡುತ್ತಾರೆ ಎಂಬ ನಂಬಿಕೆ ಇರುವುದರಿಂದ ಈ ಪೂಜೆಗೆ ಎಲ್ಲಿಲ್ಲದ ಬೇಡಿಕೆ ಇದೆ.

ಲಿಂಗಕ್ಕೆ ಅನ್ನ ಹಾಗೂ ಮೊಸರಿನಿಂದ ಮೆತ್ತಿ ಮೇಲ್ಗಡೆ ದಾಳಿಂಬೆ ಹಣ್ಣಿನ ಬೀಜಗಳನ್ನು ಅಲಂಕಾರ ಮಾಡುವದನ್ನೇ ಬುತ್ತಿ ಪೂಜೆ ಎನ್ನುತ್ತಾರೆ.

ಬುತ್ತಿ ಪೂಜೆಗೆ ಮೊದಲು ರುದ್ರಾಭಿಷೇಕ, ಪಂಚಾಭಿಷೇಕ ಮಾಡಿ ಬಳಿಕ ಅಲಂಕಾರ ಪೂಜೆ ಮಾಡಿ ಭಕ್ತರು ತಮ್ಮ ಬೇಡಿಕೆಗಳನ್ನು ಈಡೇರಿಸುವ ಶಿವನಿಗೆ ಕೃತಜ್ಞತೆ ಸಲ್ಲಿಸುತ್ತಾರೆ.

ಶ್ರಾವಣ ಮಾಸದಲ್ಲಿ ಮಾತ್ರ ಈ ಪೂಜೆ ನಡೆಯುವದು ಇನ್ನೊಂದು ವಿಶೇಷ. ಕುಟುಂಬದ ಸದಸ್ಯರು ಶಿವನ ಮಂಟಪದಲ್ಲಿ ರಂಗೋಲಿ ಬಿಡಿಸಿ, ಮಂಟಪಕ್ಕೆ ಅಲಂಕಾರ ಮಾಡಿ ದೇವರ ಸೇವೆಯನ್ನು ಮಾಡುತ್ತಾರೆ.

ಒಟ್ಟಿನಲ್ಲಿ ಶ್ರಾವಣ ಮಾಸದಲ್ಲಿ ಜಗತ್ ರಕ್ಷಕ ಶಿವನಿಗೆ ಬುತ್ತಿ ಪೂಜೆ ಮಾಡುವ ಮೂಲಕ ಭಕ್ತರು ಒಳ್ಳೆಯದನ್ನು ಕರುಣಿಸು ದೇವರೆ ಎಂದು ಹರಕೆ ಹೊರುತ್ತಾರೆ. ಈ ಪೂಜೆಯಿಂದ ದೇವರ ಕೃಪೆ ಆಗುತ್ತದೆ ಎಂಬ ನಂಬಿಕೆಯಿಂದ ಈ ಪೂಜೆ ವಿಶೇಷ ಸ್ಥಾನ ಪಡೆದಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande