ಹಾರ್ಜೇನಹಳ್ಳಿಯಲ್ಲಿ ನಾಗಸುಬ್ರಹ್ಮಣ್ಯರ ಪ್ರಾಣ ಪ್ರತಿಷ್ಟಾಪನೆ
ಹಾರ್ಜೇನಹಳ್ಳಿಯಲ್ಲಿ ನಾಗಸುಬ್ರಹ್ಮಣ್ಯರ ಪ್ರಾಣ ಪ್ರತಿಷ್ಟಾಪನೆ
ಕೋಲಾರ ತಾಲ್ಲೂಕಿನ ಹಾರ್ಜೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ನಾಗಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಶ್ರೀ ನಾಗದೇವರ ಶಿಲಾ ವಿಗ್ರಹದ ಪ್ರಾಣ ಪ್ರತಿಷ್ಟಾಪನೆ ಭಾನುವಾರ ನಡೆಯಿತು.


ಕೋಲಾರ, ೨೭ ಜುಲೈ (ಹಿ.ಸ) :

ಆ್ಯಂಕರ್ : ತಾಲ್ಲೂಕಿನ ಹಾರ್ಜೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ನಾಗಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಶ್ರೀ ನಾಗದೇವರ ಶಿಲಾ ವಿಗ್ರಹದ ಪ್ರಾಣ ಪ್ರತಿಷ್ಟಾಪನೆ ಭಾನುವಾರ ನಡೆದಿದ್ದು, ಪೂಜೆಯ ನೇತೃತ್ವವನ್ನು ಗ್ರಾಮದ ಮುಖಂಡರರಾದ ಹೆಚ್.ಎಸ್.ಶ್ರೀನಿವಾಸಮೂರ್ತಿ ಕುಟುಂಬದವರು ವಹಿಸಿದ್ದರು.

ಬೆಳಗ್ಗೆ ಗಂಟೆಗೆ ನೇತ್ರೋನ್ಮಿಲನ, ಪ್ರಾಣಪ್ರತಿಷ್ಟೆ, ಗಣಪತಿಹೋಮ, ನವಗ್ರಹ ಹೋಮ, ಸುಬ್ರಹ್ಮಣ್ಯ ಹೋಮ ಕಳಾಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ ನಡೆದಿದ್ದು, ನಂತರ ನಾಗಸುಬ್ರಹ್ಮಣ್ಯ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಹಾರ್ಜೇನಹಳ್ಳಿ ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದು, ಇಡೀ ದಿನ ವಿಶೇಷ ಪೂಜೆಗಳನ್ನು ನಡೆಸಿ ಎಲ್ಲರಿಗೂ ಅನ್ನದಾಸೋಹ ನಡೆಸಲಾಯಿತು.

ಪೂಜಾ ಕಾರ್ಯಕ್ರಮಗಳಲ್ಲಿ ಶ್ರೀನಿವಾಸಮೂರ್ತಿ, ಸತೀಶ್, ಮಂಜುನಾಥ್, ನಿವೃತ್ತ ಎಸ್‌ಎಫ್‌ಸಿಎಸ್ ಎಂಡಿ ರಾಮಚಂದ್ರ, ಚೆಂಜಿಮಲೆ ಗೋಪಿನಾಥ್, ಸಿ.ವಿ.ಶ್ರೀಧರ್, ವಕೀಲ ಸಿ.ವಿ.ಕೃಷ್ಣಮೂರ್ತಿ,ದೊಡ್ಡರಾಘವಯ್ಯ, ರವಿಶಂಕರ್,ಶ್ರೀಪತಿ,ರವಿ ಸೇರಿದಂತೆ ಹಾರ್ಜೇನಹಳ್ಳಿ ಗ್ರಾಮಸ್ಥರು ಮತ್ತಿತರರು ಹಾಜರಿದ್ದು, ಚಿಕ್ಕರಾಘವಯ್ಯ ರಾಜ್‌ಕುಮಾರ್ ಅವರು ಹಾಡಿದ ಭಕ್ತಿಗೀತೆಗಳನ್ನು ಹಾಡಿ ರಂಜಿಸಿದರು.

ಚಿತ್ರ ; ಕೋಲಾರ ತಾಲ್ಲೂಕಿನ ಹಾರ್ಜೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ನಾಗಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಶ್ರೀ ನಾಗದೇವರ ಶಿಲಾ ವಿಗ್ರಹದ ಪ್ರಾಣ ಪ್ರತಿಷ್ಟಾಪನೆ ಭಾನುವಾರ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande