ನಾಗಲಾಪುರ ಮಠದ ಶ್ರೀಗಳಿಂದ ಶ್ರಾವಣ ಮಾಸ ಆಚರಣೆ
ನಾಗಲಾಪುರ ಮಠದ ಶ್ರೀಗಳಿಂದ ಶ್ರಾವಣ ಮಾಸ ಆಚರಣೆ
ಕೋಲಾರ ತಾಲ್ಲೂಕಿನ ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರಾವಣ ಮಾಸಾಚರಣೆ ಆಚರಿಸಿದರು.


ಕೋಲಾರ., ೨೭ ಜುಲೈ (ಹಿ.ಸ) :

ಆ್ಯಂಕರ್ : ಶ್ರಾವಣ ಮಾಸದ ಅಂಗವಾಗಿ ಕೋಲಾರ ನಗರದ ಅರಳೇಪೇಟೆಯಲ್ಲಿನ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ನಾಗಲಾಪುರ ಮಠದ ಶ್ರೀಗಳಿಂದ ಇಷ್ಟಲಿಂಗ ಶಿವಪೂಜೆಯೊಂದಿಗೆ ೧೩ನೇ ವರ್ಷದ ಶ್ರಾವಣ ಶಿವಸಂಜೆ ಶಿವಾನುಭವ ಕಾರ್ಯಕ್ರಮದ ಪ್ರಾರಂಭೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಶ್ರೀಮದ್ ರಂಬಾಪುರಿ ಪೀಠದ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿದ್ಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಿಶ್ವಶಾಂತಿ, ಲೋಕಕಲ್ಯಾಣಾರ್ಥವಾಗಿ ವಿಶ್ವವಸುನಾಮ ಸಂವತ್ಸರ ಶ್ರಾವಣ ಮಾಸದ ಮನೆ ಮನೆಗಳಲ್ಲಿ ಶ್ರಾವಣ ಶಿವಸಂಜೆ, ಮಹಾ ಶಿವಪೂಜೆ ಶಿವಾನುಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಥಮ ದಿನ ಶುಕ್ರವಾರದಂದು ಸಂಜೆ ಕೋಲಾರದ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಇಷ್ಟ ಲಿಂಗ ಮಹಾ ಪೂಜಾ ಕಾರ್ಯಕ್ರಮವು ಶ್ರದ್ದಾಭಕ್ತಿಯಿಂದ ವ್ಯವಸ್ಥಿತವಾಗಿ ಏರ್ಪಡಿಸಲಾಗಿತ್ತು.

ಶ್ರಾವಣ ಶಿವಪೂಜೆ ಶಿವಾನುಭವ ಕಾರ್ಯಕ್ರಮವನ್ನು ನಾಗಲಾಪುರ ಮಠಾಧ್ಯಕ್ಷರಾದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿದ್ಯ ವಹಿಸಿ, ಆರ್ಶೀವಚನ ನೀಡಿದರು. ಹಲವು ಭಕ್ತರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಭಗವಂತನ ಕೃಪೆಗೆ ಪಾತ್ರರಾಗಿ, ಶ್ರಾವಣ ಶಿವಸಂಜೆ ಶಿವಾನುಭವ ಕಾರ್ಯಕ್ರಮ ಯಶಸ್ವಿಗೊಳಿಸಲು ಕಾರಣಕರ್ತರಾಗಿದ್ದರು.

ಚಿತ್ರ ; ಕೋಲಾರ ತಾಲ್ಲೂಕಿನ ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರಾವಣ ಮಾಸಾಚರಣೆ ಆಚರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande