ಗದಗ, 27 ಜುಲೈ (ಹಿ.ಸ.) :
ಆ್ಯಂಕರ್ : ಗದಗ ನಗರದ ಭೀಷ್ಮ ಕೆರೆಯಲ್ಲಿ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ತಾಯಿಯೊಬ್ಬರನ್ನು ಪ್ರವಾಸಿ ಮಿತ್ರರು ತಕ್ಷಣ ಕಾರ್ಯಾಚರಣೆ ನಡೆಸಿ ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.
ಮಾಹಿತಿಯ ಪ್ರಕಾರ, ಕೌಟುಂಬಿಕ ಕಲಹವೇ ಈ ತಾಯಿಯ ಭೀಕರ ನಿರ್ಧಾರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ತಾಯಿ ಇಬ್ಬರು ಮಕ್ಕಳೊಂದಿಗೆ ಭೀಷ್ಮ ಕೆರೆಯಲ್ಲಿ ಜಲಸಮಾಧಿಗೆ ಯತ್ನಿಸಿದ ಸಂದರ್ಭದಲ್ಲಿ, ಸ್ಥಳದಲ್ಲಿದ್ದ ಪ್ರವಾಸಿ ಮಿತ್ರರಾದ ಎಂ.ಬಿ. ಹೂಗಾರ, ಎಂ.ಎನ್. ಮಾದರ್ ಮತ್ತು ಎಸ್.ಎಲ್. ಕೊರವರ್ ಅವರು ತಕ್ಷಣ ಅವರನ್ನು ರಕ್ಷಿಸಿದ್ದಾರೆ.
ಘಟನೆ ಯಾದ ತಕ್ಷಣ ಅವರು 112 ಗೆ ಕರೆಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ತಾಯಿ ಮತ್ತು ಮಕ್ಕಳನ್ನು ಗದಗ ಶಹರ ಠಾಣೆಯ ಪೊಲೀಸರಿಗೆ ಒಪ್ಪಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಸಮಯೋಚಿತ ಕಾರ್ಯಾಚರಣೆ ನಡೆಸಿದ ಪ್ರವಾಸಿ ಮಿತ್ರರ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / lalita MP