ಮನ್ ಕಿ ಬಾತ್ ವೀಕ್ಷಣೆ ‌ಮಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಗದಗ, 27 ಜುಲೈ (ಹಿ.ಸ.) : ಆ್ಯಂಕರ್ : ಗದಗ ತಾಲೂಕಿನ ಸೊರಟೂರ ಗ್ರಾಮದಲ್ಲಿ ಪ್ರಧಾನ ಮಂತ್ರಿಗಳ “ಮನ್ ಕಿ ಬಾತ್” ಕಾರ್ಯವನ್ನು ವೀಕ್ಷಣೆ ‌ಮಾಡಲಾಯಿತು. ಗ್ರಾಮದ 2ನೇ ವಾರ್ಡಿನ ಭೂ ನಂ. 221 ರ ಶ್ರೀ ಫಕ್ಕೀರೇಶ ಗುಗ್ಗರಿ ಅವರ ಮನೆಯಲ್ಲಿ ಈ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ
ಪೋಟೋ


ಗದಗ, 27 ಜುಲೈ (ಹಿ.ಸ.) :

ಆ್ಯಂಕರ್ : ಗದಗ ತಾಲೂಕಿನ ಸೊರಟೂರ ಗ್ರಾಮದಲ್ಲಿ ಪ್ರಧಾನ ಮಂತ್ರಿಗಳ “ಮನ್ ಕಿ ಬಾತ್” ಕಾರ್ಯವನ್ನು ವೀಕ್ಷಣೆ ‌ಮಾಡಲಾಯಿತು. ಗ್ರಾಮದ 2ನೇ ವಾರ್ಡಿನ ಭೂ ನಂ. 221 ರ ಶ್ರೀ ಫಕ್ಕೀರೇಶ ಗುಗ್ಗರಿ ಅವರ ಮನೆಯಲ್ಲಿ ಈ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ವೀಕ್ಷಿಸಿದರು.

ಈ ಸಂದರ್ಭ ಭಾರತೀಯ ಜನತಾ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಜೀವ ಸಾನ್ನಿಧ್ಯವಿದ್ದು, ಜನರಲ್ಲಿ ರಾಷ್ಟ್ರೀಯತೆಯ ಭಾವನೆ ಮೂಡಿಸಲು ಈ ಕಾರ್ಯಕ್ರಮ ಎಂದರು.ಸಂಸದ ಬಸವರಾಜ ಬೊಮ್ಮಾಯಿ ಅವರು “ಪಿಎಂ ಮನ್ ಕಿ ಬಾತ್ ಕಾರ್ಯಕ್ರಮ ದೇಶದಾದ್ಯಂತ ಜನರನ್ನು ಜಾಗೃತಗೊಳಿಸುವ ಪ್ರಭಾವಿ ವೇದಿಕೆ. ಗ್ರಾಮೀಣ ಪ್ರದೇಶಗಳವರೆಗೂ ಈ ಸಂದೇಶ ತಲುಪುತ್ತಿದೆ ಎಂಬುದೇ ಇದಕ್ಕೆ ಸತ್ಯ ಸಾಕ್ಷಿ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕೆ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಮುಖಂಡರಾದ ರವಿ ದಂಡಿನ, ಎಂ.ಎಸ್. ಕರಿಗೌಡ್ರ ಸೇರಿದಂತೆ ಹಲವಾರು ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಗ್ರಾಮಸ್ಥರ ಉಪಸ್ಥಿತಿ ಗಮನಾರ್ಹವಾಗಿದ್ದು, “ಮನ್ ಕಿ ಬಾತ್”ದ ಸಂದೇಶವನ್ನು ಒಟ್ಟಾಗಿ ಕೇಳುವ ಮೂಲಕ ಗ್ರಾಮೀಣ ಸಮೂಹ ಜಾಗೃತಿಯ ಮಹತ್ವ ಮೆರೆದರು. ಸ್ಥಳೀಯರು ಸಂಸದರ ಭೇಟಿಗೆ ಉತ್ಸಾಹದಿಂದ ಸ್ಪಂದಿಸಿದ್ದು, ಆಮಂತ್ರಕರಾದ ಫಕ್ಕೀರೇಶ ಗುಗ್ಗರಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande