ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ
ಬೆಂಗಳೂರು, 27 ಜುಲೈ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ 2024-25ನೇ ಸಾಲಿನಲ್ಲಿ ಮಹಿಳಾ ತರಬೇತಿ ಯೋಜನೆಯಡಿ 18 ವರ್ಷ ಮೇಲ್ಪಟ್ಟ ಹಾಗೂ 35 ವರ್ಷದ ನಿರುದ್ಯೋಗಿ ಮಹಿಳೆಯರಿಗೆ ಅಸಿಸ್ಟೆಂಟ್ ಫ್ಯಾಷನ್ ಡಿಸೈನರ್ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ
ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ


ಬೆಂಗಳೂರು, 27 ಜುಲೈ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ 2024-25ನೇ ಸಾಲಿನಲ್ಲಿ ಮಹಿಳಾ ತರಬೇತಿ ಯೋಜನೆಯಡಿ 18 ವರ್ಷ ಮೇಲ್ಪಟ್ಟ ಹಾಗೂ 35 ವರ್ಷದ ನಿರುದ್ಯೋಗಿ ಮಹಿಳೆಯರಿಗೆ ಅಸಿಸ್ಟೆಂಟ್ ಫ್ಯಾಷನ್ ಡಿಸೈನರ್ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿಯನ್ನು ಒಟ್ಟು 33 ಮಹಿಳೆಯರಿಗೆ ಶ್ರೀ ಕಲೈ ಹರ್ಬಲ್ ಬ್ಯೂಟಿ ಪಾರ್ಲರ್, 3ನೇ ಮಹಡಿ , ಸಿ35/1, 6ನೇ ಕ್ರಾಸ್ , 80 ಅಡಿ ರಿಂಗ್ ರೋಡ್, ಇಂಡಸ್ಇಂಡ್ ಬ್ಯಾಂಕ್ ಹತ್ತಿರ, ಬಸವೇಶ್ವರನಗರ, ಬೆಂಗಳೂರು-560079 ಇಲ್ಲಿ ನೀಡಲಾಗುತ್ತದೆ.

ಅಭ್ಯರ್ಥಿಯ ಸ್ವ-ವಿವರದೊಂದಿಗೆ ಎಸ್.ಎಸ್.ಎಲ್ ಸಿ ಮತ್ತು ಪಿಯುಸಿ ಅಂಕಪಟ್ಟಿ, ಆಧಾರ್ ಕಾರ್ಡ್ (ಬೆಂಗಳೂರು ನಗರ ಜಿಲ್ಲೆಗೆ ಒಳಪಡುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ) ನೊಂದಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 08,2025 ರಂದು ಕೊನೆಯ ದಿನಾಂಕವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸುಧಾರಣಾ ಸಂಕೀರ್ಣ, ಡಾ:ಎಂ.ಎಚ್.ಮರಿಗೌಡ ರಸ್ತೆ, ಬೆಂಗಳೂರು-560029 ಅಥವಾ ದೂರವಾಣಿ ಸಂಖ್ಯೆ : 9886368943 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande