ಹೋಂಸ್ಟೇ ನಿರ್ಮಾಣ : ಸಹಾಯಧನಕ್ಕೆ ಅರ್ಜಿ ಆಹ್ವಾನ
ಹಾಸನ, 27 ಜುಲೈ (ಹಿ.ಸ.) : ಆ್ಯಂಕರ್ : ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿಯಲ್ಲಿ ಹಾಸನ ಜಿಲ್ಲೆಯ 6 ಆಯ್ದ ಬುಡಕಟ್ಟು ಗ್ರಾಮಗಳಲ್ಲಿ ಹೋಂಸ್ಟೇ ನಿರ್ಮಾಣ ಹಾಗೂ ನವೀಕರಣಕ್ಕಾಗಿ ಪರಿಶಿಷ್ಟ ಪಂಗಡದ ಬುಡಕಟ್ಟು/ಆದಿವಾಸಿ ಸಮುದಾಯದವರು ಜುಲೈ 31ರೊಳಗೆ ಪ್ರವಾಸೋದ್ಯಮ ಇಲಾಖೆಗೆ ಅರ್ಜಿ ಸಲ
ಹೋಂಸ್ಟೇ ನಿರ್ಮಾಣ : ಸಹಾಯಧನಕ್ಕೆ ಅರ್ಜಿ ಆಹ್ವಾನ


ಹಾಸನ, 27 ಜುಲೈ (ಹಿ.ಸ.) :

ಆ್ಯಂಕರ್ : ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿಯಲ್ಲಿ ಹಾಸನ ಜಿಲ್ಲೆಯ 6 ಆಯ್ದ ಬುಡಕಟ್ಟು ಗ್ರಾಮಗಳಲ್ಲಿ ಹೋಂಸ್ಟೇ ನಿರ್ಮಾಣ ಹಾಗೂ ನವೀಕರಣಕ್ಕಾಗಿ ಪರಿಶಿಷ್ಟ ಪಂಗಡದ ಬುಡಕಟ್ಟು/ಆದಿವಾಸಿ ಸಮುದಾಯದವರು ಜುಲೈ 31ರೊಳಗೆ ಪ್ರವಾಸೋದ್ಯಮ ಇಲಾಖೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಯೋಜನೆಯಡಿ ಹೊಸ ಹೋಂಸ್ಟೇ ನಿರ್ಮಾಣಕ್ಕೆ ರೂ.5 ಲಕ್ಷ, ನವೀಕರಣಕ್ಕೆ ರೂ.3 ಲಕ್ಷಗಳ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯ ಉದ್ದೇಶ, ಗ್ರಾಮೀಣ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಸ್ಥಳೀಯರಿಗೆ ಸ್ವಯಂ ಉದ್ಯೋಗಾವಕಾಶ ಕಲ್ಪಿಸುವುದು.

ಅರ್ಹತೆ: ಆಯ್ಕೆಯಾದ ಅಥವಾ ಅದರ ಸಮೀಪದ ಗ್ರಾಮದ ಪರಿಶಿಷ್ಟ ಪಂಗಡದ ನಿವಾಸಿಗಳು ಅರ್ಹರು.

ಅರ್ಜಿ ಸಲ್ಲಿಸಲು ಸ್ಥಳ:

ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಎ.ವಿ.ಕೆ. ಕಾಲೇಜು ರಸ್ತೆ, ಹಾಸನ

ಹೆಚ್ಚಿನ ಮಾಹಿತಿಗೆ ಸಂಪರ್ಕ:

ಕಚೇರಿ: 08172-268862 / ಜಿಲ್ಲಾ ಸಮಾಲೋಚಕರು: 9036074715

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande