ಗದಗ, 27 ಜುಲೈ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಯೋಜನೆಯಡಿ ಗುರುತಿಸಿರುವ ಬುಡಕಟ್ಟು ಗ್ರಾಮಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೋಂ ಸ್ಟೇ ಸ್ಥಾಪಿಸಲು ರೂ.5.00 ಲಕ್ಷಗಳ ಸಹಾಯಧನವನ್ನು ಹಾಗು ಹೋಂ ಸ್ಟೇ ನವೀಕರಿಸಲು ರೂ.3.00 ಲಕ್ಷಗಳ ಸಹಾಯಧನವನ್ನು ನೀಡುವ ಸಂಬಂಧ ಪ್ರವಾಸೋದ್ಯಮ ಇಲಾಖೆಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಅರ್ಜಿದಾರರು ಗದಗ ಜಿಲ್ಲೆಯಿಂದ ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಕಾರ್ಯಕ್ರಮದಡಿ ಅದರ ಅಕ್ಕಪಕ್ಕದ ಗ್ರಾಮದ ನಿವಾಸಿಯಾಗಿರಬೇಕು. ಯೋಜನೆಯಡಿ ಆಯ್ಕೆಯಾದ ಗ್ರಾಮಗಳ ವಿವರ : ಗದಗ ಜಿಲ್ಲೆಯ ರೋಣ ತಾಲೂಕಿನ ಮೇಲ್ಮಟ , ಲಕ್ಷ್ಮೇಶ್ವರ ತಾಲೂಕಿನ ವಡೆಯರ ಮಲ್ಲಾಪುರ, ಶಿರಹಟ್ಟಿ ತಾಲೂಕಿನ ಭಾವನೂರ, ಮುಂಡರಗಿ ತಾಲೂಕಿನ ಕೆಲೂರ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಗಸ್ಟ 5 ಆಗಿದ್ದು ಅರ್ಜಿ ಹಾಗೂ ಹೆಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಎ.ಸಿ. ಕಚೇರಿ ಕಟ್ಟಡ, ಗದಗ ಜಿಲ್ಲೆ , ಗದಗ ದೂರವಾಣಿ ಸಂಖ್ಯೆ : 08372-233017, 9844269430, 9916164422 ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP